LATEST NEWS
ರಾಹುಲ್ ಟೀಮ್ ನಲ್ಲಿರುವುದು ಎಂಪಿ ಎಂಎಲ್ಎ ಗಿಂತ ದೊಡ್ಡದು- ಮಿಥುನ್ ರೈ
ರಾಹುಲ್ ಟೀಮ್ ನಲ್ಲಿರುವುದು ಎಂಪಿ ಎಂಎಲ್ಎ ಗಿಂತ ದೊಡ್ಡದು- ಮಿಥುನ್ ರೈ
ಮಂಗಳೂರು ಏಪ್ರಿಲ್ 26: ಮುಲ್ಕಿ ಮೂಡಬಿದಿರೆಯಲ್ಲಿ ಮೂರು ವರ್ಷ ಪಕ್ಷಕ್ಕಾಗಿ ದುಡಿದಿದ್ದೆ ಈ ಹಿನ್ನಲೆಯಲ್ಲಿ ಟಿಕೆಟ್ ತಪ್ಪಿದಾಕ್ಷಣ ಸ್ವಲ್ಪ ಬೇಸರ ಆಗಿತ್ತು. ಆದರೆ ಈಗ ಯಾವುದೇ ಬೇಸರವಿಲ್ಲ. ಮುಂಬರುವ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸಲಿದ್ದೇನೆ ಎಂದು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ನನಗೆ ಟಿಕೆಟ್ ಸಿಗದೇ ಇರುವ ಕಾರಣಕ್ಕೆ ಕೆಲ ಯುವ ಕಾಂಗ್ರೇಸ್ ಹಾಗೂ ಎನ್ ಎಸ್ ಯು ಐ ನ ಮುಖಂಡರು ರಾಜೀನಾಮೆ ನೀಡಿದ್ದರು, ಆದರೆ ಆ ಎಲ್ಲಾ ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.
ನಾನು ದೆಹಲಿಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿದ್ದು, ಅವರ ಟೀಮ್ ನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ ಇದು ಎಂಪಿ, ಎಂಎಲ್ ಎ ಗಿಂತಲೂ ದೊಡ್ಡದು ಎಂದು ಅವರು ಹೇಳಿದರು. ಮುಂಬರುವ ದಿನ ಗಳಲ್ಲಿ ಉನ್ನತ ಸ್ಥನಮಾನ ನೀಡುವುದಾಗಿ ಅವರು ತಿಳಿಸಿದರು ಎಂದು ಮಾರ್ಮಿಕವಾಗಿ ನುಡಿದರು.
ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಮತ್ತೆ ಮುಲ್ಕಿ ಮೂಡಬಿದಿರೆಗೆ ಹೋಗುತ್ತೇನೆ ಎಂದು ಹೇಳಿದ ಅವರು ಮುಂಬರುವ ಲೋಕ ಸಭಾ ಚುನಾವಣೆಗೆ ಸ್ಪರ್ದಿಸುವ ಕುರಿತು ಕೇಳಿದ ಪ್ರಶ್ನೆಗೆ ಮುಂದೆ ಆ ಕುರಿತು ಪ್ರತಿಕ್ರಿಯೆ ನೀಡುತ್ತೆನೆ ಎಂದು ಅವರು ಹೇಳಿದರು.
You must be logged in to post a comment Login