KARNATAKA
ಅವೈಜ್ಞಾನಿಕ ಕಾರ್ಯಾಚರಣೆಗೆ ಪ್ರಾಣತೆತ್ತ ಕಾಡುಕೋಣ
ಅವೈಜ್ಞಾನಿಕ ಕಾರ್ಯಾಚರಣೆಗೆ ಪ್ರಾಣತೆತ್ತ ಕಾಡುಕೋಣ
ಮಂಗಳೂರು ಮೇ 05: ಅರಣ್ಯ ಇಲಾಖೆಯ ಅವೈಜ್ಞಾನಿಕ ಕಾರ್ಯಾಚರಣೆಗೆ ಕಾಡುಕೋಣ ದಾರುಣ ಸಾವು ಕಂಡಿದೆ. ಇಂದು ಬೆಳಿಗ್ಗೆ ಮಂಗಳೂರು ನಗರದಾದ್ಯಂದ ಸ್ವಚ್ಚಂದವಾಗಿ ಓಡಾಡಿಕೊಂಡಿದ್ದ ಕಾಡುಕೋಣಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಾದ ಲೋಪದಿಂದಾಗಿ ಪ್ರಾಣ ಕಳೆದುಕೊಂಡಿವೆ.
ಲಾಕ್ ಡೌನ್ ನಲ್ಲಿರುವ ಮಂಗಳೂರಿಗೆ ಇಂದು ಬೆಳಿಗ್ಗೆ ಅಪರೂಪದ ಅತಿಥಿಗಳ ಅಗಮನವಾಗಿತ್ತು. ಬೆಳ್ಳಂಬೆಳಿಗ್ಗೆ ಕಾಡಿನಿಂದ ಬಂದ ಎರಡು ಕಾಡುಕೋಣಗಳು ನಗರದೆಲ್ಲಡೆ ಓಡಾಟ ನಡೆಸಿದ್ದವು, ಅದರಲ್ಲಿ ಒಂದು ಕೋಣ ಮಂಗಳೂರು ನಗರದೊಳಗೆ ಆಗಮಿಸಿತ್ತು. ಈ ಹಿನ್ನಲೆ ಅರಣ್ಯ ಇಲಾಖೆ ಸತತ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಕಾಡುಕೋಣ ಹಿಡಿಯುವಲ್ಲಿ ಸಫಲರಾಗಿದ್ದರು.
ನಂತರ ಹಿಡಿದ ಕಾಡುಕೋಣವನ್ನು ಚಾರ್ಮಾಡಿ ಗೆ ಬಿಟ್ಟು ಬರಲು ಅರಣ್ಯ ಇಲಾಖೆ ಅಧಿಕಾರಿಗಳು ತಗೆದುಕೊಂಡು ಹೋಗಿದ್ದರು, ಆದರೆ ಚಾರ್ಮಾಡಿಯಲ್ಲಿ ಕಾಡುಕೋಣ ಬಿಟ್ಟ ಸ್ವಲ್ಪ ಸಮಯದಲ್ಲೇ ಅದು ಸಾವನಪ್ಪಿದೆ ಎಂದು ಹೇಳಲಾಗಿದೆ.
ಮಂಗಳೂರಿನಲ್ಲಿ ಅವೈಜ್ಞಾನಿಕವಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಕಾಡುಕೋಣಕ್ಕೆ ನೀಡಿದ್ದ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ಸಾವನಪ್ಪಿದೆ ಎಂದು ಹೇಳಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿ ಗೆ ಅನ್ಯಾಯವಾಗಿ ಕಾಡುಕೋಣ ಪ್ರಾಣ ಬಿಟ್ಟಿದೆ.