LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ಮಂಗಳೂರು ಮೇ.06: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಇಂದು ಮತ್ತೆ ಮೂವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಜಿಲ್ಲೆಯ ಬೊಳೂರು ಮತ್ತು ಬಂಟ್ವಾಳ ನಿವಾಸಿಗಳಿಗೆ ಕೊರೊನಾ ಸೊಂಕು ದೃಢಪಟ್ಟಿದೆ.ಈ ಬಾರಿ ದಕ್ಷಿಣಕನ್ನಡದಲ್ಲಿ ಮಕ್ಕಳಲ್ಲಿ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ ಮಹಿಳೆಯಿಂದ ಪಿ -536 ರ ಸಂಪರ್ಕದಿಂದ 11 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿದೆ.
ಬಂಟ್ವಾಳದ ಮೃತ ಮಹಿಳೆ ಪಿ- 390 ಸಂಪರ್ಕದಿಂದ ಆಕೆಯ 16 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ.
ಇಂದು ಪತ್ತೆಯಾದ 3 ಪ್ರಕರಣಗಳಿಂದ ಜಿಲ್ಲೆಯಲ್ಲಿ ಈಗ ಒಟ್ಟು 13 ಕೊರೊನಾ ಪಾಸಿಟಿವಿ ಆಕ್ಟಿವ್ ಪ್ರಕರಣ ಇದೆ.
You must be logged in to post a comment Login