Connect with us

    KARNATAKA

    ಒಂದೇ ಬೈಕ್ ನಲ್ಲಿ ನಾಲ್ವರು ಯುವಕರ ರೈಡಿಂಗ್ – ಅಪಘಾತಕ್ಕೆ ನಾಲ್ವರು ಸಾವು

    ಬೆಳಗಾವಿ: ಬೈಕ್ ನಲ್ಲಿ ನಾಲ್ವರು ಯುವಕರು ಸಂಚರಿಸಲು ಹೋಗಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಗುಂಡಿಗೆ ಬಿದ್ದು ನಾಲ್ವರು ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.


    ಬಸವರಾಜ ಮಾಳಿ (23),ಪ್ರವೀಣ ಸನದಿ (24), ಮೆಹಬೂಬ ಶೇಗಡಿ (23) ಸ್ಥಳದಲ್ಲೇ ಮೃತಪಟ್ಟವರು. ಫರ್ಹಾನ್ ಮಲಿಕ್ ಜಮಾದಾರ್ ಎಂಬ ಯುವಕ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ .


    ಸಂಕೇಶ್ವರ ಪಟ್ಟಣದ ನಿವಾಸಿಗಳಾದ ನಾಲ್ವರು ಗೆಳೆಯರು ಒಂದೆ ಬೈಕ್ ನಲ್ಲಿ ನಿಪ್ಪಾಣಿ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವ ವೇಳೆ ಏಕಾಏಕಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದು,ಪರಿಣಾಮ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದರು,ಇನ್ನೊರ್ವ ಸ್ಥಿತಿ ಚಿಂತಾಜನಕವಾಗಿತ್ತು ,ಆತನನ್ನ ಚಿಕಿತ್ಸೆ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಆತನು ಶುಕ್ರವಾರ ಮುಂಜಾನೆ ಮೃತ ಪಟ್ಟಿದ್ದಾನೆ .

    Share Information
    Advertisement
    Click to comment

    You must be logged in to post a comment Login

    Leave a Reply