Connect with us

    KARNATAKA

    ಭಟ್ಕಳ ತಾಯಿ ಮನೆಗೆ ಅಂತ ಹೇಳಿ ಮಿಶ್ರಿಯಾ ಹೋದದ್ದೆಲ್ಲಿ..!?

    ಭಟ್ಕಳ : ಉತ್ತರ ಕನ್ನಡ ದ ಭಟ್ಕಳ ಕೋಳಿ ಫಾರ್ಮ, ಬದ್ರಿಯಾ ಕಾಲೋನಿ ನಿವಾಸಿ 25 ವರ್ಷದ ಮಿಶ್ರಿಯಾ ಎಂಬ ಮಹಿಳೆ ಮಗುವಿನೊಂದಿಗೆ ಕಾಣೆಯಾಗಿದ್ದಾಳೆ.

    ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜ.30ರಂದು ಬೆಳಗ್ಗೆ 11 ಗಂಟೆಗೆ ಮಿಶ್ರಿಯಾ ತನ್ನ 2 ವರ್ಷದ ಮಗಳು ಆಯಿಶಾ ಮೀನಾ ಅವಳೊಂದಿಗೆ ತಾಯಿ ಮನೆಗೆ ಹೋಗುತ್ತೇನೆ ಎಂದು ಪಕ್ಕದ ಮನೆಯವರಿಗೆ ಹೇಳಿ ಹೋಗಿದ್ದು, ತನ್ನತಾಯಿ ಮನೆಗೂ ಹೋಗದೇ , ಸಂಬಂಧಿಕರ ಮನೆಗೂ ಹೋಗದೇ ಏಕಾಏಕಿ ಕಾಣೆಯಾಗಿದ್ದಾರೆ.

    ಕಾಣೆಯಾದ ಮಹಿಳೆಯ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು, 5.0 ಅಡಿ ಎತ್ತರ, ಬಲಗಣ್ಣಿನ ಹತ್ತಿರಕಪ್ಪು ಎಳ್ಳಿನ ಗುರುತು. ಬ್ಯಾರಿ, ಕನ್ನಡ ಭಾಷೆ ಮಾತನಾಡುತ್ತಾರೆ.ಕಾಣೆಯಾದ ಮಗುವಿನ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು 3ಅಡಿ ಎತ್ತರ. ಬ್ಯಾರಿ ಭಾಷೆ ಮಾತನಾಡುತ್ತಾಳೆ.

    ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯ ದೂರವಾಣಿ ಸಂಖ್ಯೆ 08385-227333, ಮೊಬೈಲ್ ನಂ. 9480805252, ಕಾರವಾರ ಪೊಲೀಸ್ ಕಂಟ್ರೋಲ್‌ ರೂ. 08382-226550 ಅಥವಾ 112 ಅಥವಾ 100 ಗೆ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್‌ಠಾಣೆ ಪೊಲೀಸ್‌ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *