DAKSHINA KANNADA
ಮಂಗಳೂರು ಸೌದಿ ಅರೇಬಿಯಾ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ ಏರ್ ಇಂಡಿಯಾ..!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳೂರು: ಮಂಗಳೂರಿನಿಂದ ಸೌದಿ ಅರೇಬಿಯಾಕ್ಕೆ ಹೋಗುವ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಶುಭ ಸುದ್ದಿ ನೀಡಿದೆ.
ಮುಂಬರುವ ಬೇಸಿಗೆ ವೇಳಾಪಟ್ಟಿಯಲ್ಲಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಜಿದ್ದಾಕ್ಕೆ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಎಪ್ರಿಲ್ 3ರಿಂದ ಪ್ರತಿ ಬುಧವಾರ ಸಾಪ್ತಾಹಿಕ ವಿಮಾನ ಹಾರಾಟ ನಡೆಸಲಿರುವುದನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರಕಟಿಸಿದೆ. ಏರ್ ಇಂಡಿಯಾ ವಿಮಾನ (IX 499) ಮಧ್ಯಾಹ್ನ 2:50ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 6:25ಕ್ಕೆ (ಜಿದ್ದಾ ಸಮಯ) ಜಿದ್ದಾ ತಲುಪಲಿದೆ. ಜಿದ್ದಾದಿಂದ ವಿಮಾನ (IX 498) ಬುಧವಾರ ರಾತ್ರಿ 7:25ಕ್ಕೆ (ಜಿದ್ದಾ ಸಮಯ) ಹೊರಟು ಮರುದಿನ (ಗುರುವಾರ) ಬೆಳಗ್ಗಿನ ಜಾವ 3:40ಕ್ಕೆ ಮಂಗಳೂರನ್ನು ತಲುಪಲಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ನ ಈ ಹೊಸ ವಿಮಾನಕ್ಕೆ ಬುಕಿಂಗ್ ಆರಂಭಗೊಂಡಿದೆ. ಈ ವಿಮಾನಕ್ಕಾಗಿ ಏರ್ಲೈನ್ 186-ಆಸನಗಳ ಬೋಯಿಂಗ್ 737-800 ವಿಮಾನವನ್ನು ನಿಯೋಜಿಸಲಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login