Connect with us

    LATEST NEWS

    ನಿರ್ಮಾಣ ಹಂತದ ಮನೆ ಮೇಲಿಂದ ಬಿದ್ದು ಆಟೋ ಚಾಲಕ ಮೃತ್ಯು..!

    ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆ ಮೇಲಿಂದ  ಆಟೋ ಚಾಲಕರೋರ್ವರು ಮೃತಪಟ್ಟ ಘಟನೆ ಕಾಸರಗೋಡಿನ ಬಂದ್ಯೋಡ್ ಸಮೀಪದ ಕುಬಣೂರಿನಲ್ಲಿ ನಡೆದಿದೆ.

    ಕುಬಣೂರಿನ ಪದ್ಮನಾಭ (45) ಮೃತಪಟ್ಟ ದುರ್ದೈವಿ. ಬಂದ್ಯೋಡ್ ನಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಅವರು ಗುರುವಾರ ಸಂಜೆ ತಮ್ಮ ಮನೆಯ ಸಮೀಪದ ನಿರ್ಮಾಣ ಹಂತದಲ್ಲಿರುವ ಮನೆಯ ಮಹಡಿಗೆ ಹತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಗಂಭೀರ ಗಾಯಗೊಂಡಿದ್ದರು.

    ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯಾಹ್ನ ಮೃತಪಟ್ಟರು ಎಂದು ತಿಳಿದುಬಂದಿದೆ. ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply