FILM
ನಾಟು ನಾಟು ಹಾಡಿಗೆ ಅತ್ಯುತ್ತಮ ಹಾಡು ಆಸ್ಕರ್ ಪ್ರಶಸ್ತಿ: ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ, ಮಾರ್ಚ್ 13: ಎಸ್.ಎಸ್ ರಾಜಮೌಲಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು‘ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದಿದೆ.
ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಈ ಹಾಡು ಪ್ರಶಸ್ತಿ ಬಾಚಿಕೊಂಡಿದೆ. ಇದು ಈ ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಈ ಹಿಂದೆ ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ ಚಾಯ್ಸ್ ಅವಾರ್ಡ್‌ಗೆ ಈ ಹಾಡು ಪಾತ್ರವಾಗಿತ್ತು. ಚಂದ್ರಬೋಸ್ ಬರೆದಿರುವ ಈ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ಗೆದ್ದ ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು‘ ಹಾಡು ಬರೆದಿದರುವ ಚಂದ್ರಬೋಸ್ ಹಾಗೂ ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿಸಿದ್ದಾರೆ.
ಈ ಸಾಧನೆಯನ್ನು ಅಸಾಧಾರಣ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು ಎಂದು ಬಣ್ಣಿಸಿದ್ದಾರೆ.
Exceptional!
The popularity of ‘Naatu Naatu’ is global. It will be a song that will be remembered for years to come. Congratulations to @mmkeeravaani, @boselyricist and the entire team for this prestigious honour.
India is elated and proud. #Oscars https://t.co/cANG5wHROt
— Narendra Modi (@narendramodi) March 13, 2023
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಅಸಾಧಾರಣ…. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವ ಪಡೆದ ಕೀರವಾಣಿ, ಚಂದ್ರಬೋಸ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು. ಇಡೀ ಭಾರತ ಹೆಮ್ಮೆ ಪಟ್ಟುಕೊಳ್ಳುತ್ತದೆ‘ ಎಂದು ಅವರು ಬರೆದುಕೊಂಡಿದ್ದಾರೆ.