Connect with us

    FILM

    ನಾಟು ನಾಟು ಹಾಡಿಗೆ ಅತ್ಯುತ್ತಮ ಹಾಡು ಆಸ್ಕರ್‌ ಪ್ರಶಸ್ತಿ: ಪ್ರಧಾನಿ ಮೋದಿ ಅಭಿನಂದನೆ

    ನವದೆಹಲಿ, ಮಾರ್ಚ್ 13: ಎಸ್.ಎಸ್‌ ರಾಜಮೌಲಿ ನಿರ್ದೇಶನದ ಆರ್‌.ಆರ್‌.ಆರ್ ಸಿನಿಮಾದ ‘ನಾಟು ನಾಟು‘ ಹಾಡಿಗೆ ಆಸ್ಕರ್‌ ಪ್ರಶಸ್ತಿ ಒಲಿದಿದೆ.

    ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಈ ಹಾಡು ಪ್ರಶಸ್ತಿ ಬಾಚಿಕೊಂಡಿದೆ. ಇದು ಈ ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಈ ಹಿಂದೆ ‌ಗೋಲ್ಡನ್‌ ಗ್ಲೋಬ್‌ ಹಾಗೂ ಕ್ರಿಟಿಕ್‌ ಚಾಯ್ಸ್‌ ಅವಾರ್ಡ್‌ಗೆ ಈ ಹಾಡು ಪಾತ್ರವಾಗಿತ್ತು. ಚಂದ್ರಬೋಸ್‌ ಬರೆದಿರುವ ಈ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ.

    ಆಸ್ಕರ್‌ ಪ್ರಶಸ್ತಿ ಗೆದ್ದ ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು‘ ಹಾಡು ಬರೆದಿದರುವ ಚಂದ್ರಬೋಸ್‌ ಹಾಗೂ ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿಸಿದ್ದಾರೆ.

    ಈ ಸಾಧನೆಯನ್ನು ಅಸಾಧಾರಣ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು ಎಂದು ಬಣ್ಣಿಸಿದ್ದಾರೆ.

    ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಅಸಾಧಾರಣ…. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವ ಪಡೆದ ಕೀರವಾಣಿ, ಚಂದ್ರಬೋಸ್‌ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು. ಇಡೀ ಭಾರತ ಹೆಮ್ಮೆ ಪಟ್ಟುಕೊಳ್ಳುತ್ತದೆ‘ ಎಂದು ಅವರು ಬರೆದುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply