Connect with us

FILM

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ

ಬೆಂಗಳೂರು ಫೆಬ್ರವರಿ 21: ಇಂದಿನಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಾರಂಭವಾಗಲಿದೆ. 11 ನೇ ಆವೃತ್ತಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ 6 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅದ್ದೂರಿ ಚಾಲನೆ ದೊರೆಯಲಿದೆ.

ಸಿ.ಎಂ ಎಚ್ ಡಿ ಕುಮಾರಸ್ವಾಮಿ ಸಿನಿಮೋತ್ಸವಕ್ಕೆ ಚಾಲನೆ ನೀಡಲಿದ್ದು, ಈ ಬಾರಿಯ ಚಲನಚಿತ್ರೋತ್ಸದ ಮುಖ್ಯ ಅತಿಥಿಗಳಾಗಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಮತ್ತು ಬಾಲಿವುಡ್ ನಿರ್ದೇಶಕ ರಾಹುಲ್ ರವೈಲ್ ಆಗಮಿಸಲಿದ್ದಾರೆ. ಸುಮಾರು 60 ದೇಶದ 225 ಚಿತ್ರಗಳು ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನವಾಗಲಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರೆಯಾನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಚಿತ್ರಗಳ ಪ್ರದರ್ಶನವಾಗಲಿದೆ.

ಈ ಬಾರಿಯ ಫಿಲ್ಮ್ ಫೆಸ್ಟ್ ನ ಸ್ಪರ್ಧಾತ್ಮಕ ವಿಭಾಗದಲ್ಲಿ ಕನ್ನಡದ ಹಲವು ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ವರ್ಲ್ಡ್ ಸಿನಿಮಾ, ಏಷ್ಯಾ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಕನ್ನಡ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಏಷ್ಯಾ ವಿಭಾಗದಲ್ಲಿ ಸುಮಾರು 15 ಚಿತ್ರಗಳು ನಾಮನಿರ್ದೇಶನವಾಗಿದ್ದು, ಕನ್ನಡ ವಿಭಾಗದಿಂದ ಪಿ ಶೇಷಾದ್ರಿ ನಿರ್ದೇಶನದ ‘ಮೂಕಜ್ಜಿಯ ಕನಸುಗಳು’ ಆಯ್ಕೆಯಾಗಿದೆ.
ಇನ್ನು ಭಾರತೀಯ ಸಿನಿಮಾ ವಿಭಾಗದಲ್ಲಿ ಭರ್ತಿ 12 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಅದ್ರಲ್ಲಿ ಎರಡು ಕನ್ನಡ ಚಿತ್ರಗಳಿದ್ದು, ‘ಆ ಕರಾಳ ರಾತ್ರಿ’ ಮತ್ತು ‘ಅಮ್ಮಚ್ಚಿಯೆಂಬ ನೆನಪು’ ನಾಮ ನಿರ್ದೇಶನಗೊಂಡಿದೆ.

ಕನ್ನಡ ಸಿನಿಮಾ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 13 ಚಿತ್ರಗಳು ಪೈಪೋಟಿ ನಡೆಸಲಿವೆ. ‘ಅತ್ತಯ್ಯ ವರ್ಸಸ್ ಹಂದಿ ಕಾಯೋಳು, ‘ಬೆಳಕಿನ ಕನ್ನಡಿ, ‘ಕಾನೂರಾಯಾಣ, ‘ನಾತಿಚರಮಿ, ‘ನೀರು, ‘ಸ್ಮಶಾನ ಮೌನ’, ‘ಸಾವಿತ್ರಿ ಬಾಯಿ ಫುಲೆ’, ‘ಅನಂತು ವರ್ಸಸ್ ನುಸ್ರತ್, ‘ಅನುತ್ತರ. ‘ಒಂದಲ್ಲಾ ಎರಡಲ್ಲಾ’, ‘ರಾಮನ ಸವಾರಿ’, ‘ಸಮಾನತೆಯ ಕಡೆಗೆ’, ಮತ್ತು ವಿಶ್ವಮಾನವ ಚಿತ್ರಗಳು ಸಿನಿಪ್ರಿಯರನ್ನು ರಂಜಿಸಲಿವೆ.

ಅಂದಹಾಗೆ ವರ್ಷದ ಅತ್ಯುತ್ತಮ ಮನೋರಂಜನ ಚಿತ್ರಗಳ ವಿಭಾಗದಲ್ಲಿ ‘ರಾಜು ಕನ್ನಡ ಮೀಡಿಯಂ’, ‘ಹಂಬಲ್ ಪೊಲಿಟಿಶಿಯನ್ ನೊಗರಾಜ್’, ‘ಟಗರು’, ‘ಅಯೋಗ್ಯ’ ‘ದಿ ವಿಲನ್’, ಮತ್ತು ಕೆಜಿಎಫ್ ನಡುವೆ ಪೈಪೋಟಿ ನಡೆಯಲಿದೆ.

ಒಟ್ಟಾರೆ ಇಂದು ಅದ್ಧೂರಿ ಚಾಲನೆ ಪಡೆದುಕೊಳ್ಳಲಿರುವ 11ನೇ ಫಿಲ್ಟ್ ಫೆಸ್ಟಿವಲ್ ಗೆ, ಫೆಬ್ರವರಿ 28ರಂದು ತೆರೆ ಬೀಳಲಿದೆ.

Facebook Comments

comments