Connect with us

    BANTWAL

    ಬಂಟ್ವಾಳ – ಪೇಂಟಿಂಗ್ ವೇಳೆ ಆಯತಪ್ಪಿ ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

    ಬಂಟ್ವಾಳ ಎಪ್ರಿಲ್ 01: ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸೋರ್ನಾಡು ಎಂಬಲ್ಲಿ ನಡೆದಿದೆ.


    1ಮೃತರನ್ನು ಜಕ್ರಿಬೆಟ್ಟು ಪಲ್ಲಿಕಂಡ ನಿವಾಸಿ ರಾಬರ್ಟ್ ವೇಗಸ್ (51) ಎಂದು ಗುರುತಿಸಲಾಗಿದೆ. ವಿಜಯ್ ಎಂಬ ಪೇಂಟಿಂಗ್ ಗುತ್ತಿಗೆದಾರನ ಜೊತೆ ರಾಬರ್ಟ್‌ ವೇಗಸ್ ಅವರು ಪೇಂಟಿಂಗ್ ಕೆಲಸಕ್ಕೆ ಇದ್ದು, ಸೋರ್ನಾಡು ಎಂಬಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 1 ಗಂಟೆ ವೇಳೆಗೆ ಆಕಸ್ಮಿಕವಾಗಿ ಮೇಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಚಿಕಿತ್ಸೆ ಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಆದರೆ ಗಂಭೀರವಾಗಿ ಗಾಯಗೊಂಡ ರಾಬರ್ಟ್ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply