Connect with us

    DAKSHINA KANNADA

    ಪುತ್ತೂರು ಮಹಿಳಾ ಎಸ್ ಐ ಮೇಲೆ ಹಲ್ಲೆ – ಸಹೋದರಿಯರ ಬಂಧನ

    ಪತ್ತೂರು ಮಾರ್ಚ್ 2: ಕೌಟುಂಬಿಕ ಸಮಸ್ಯೆಯ ದೂರಿನ ವಿಚಾರಣೆ ಸಂದರ್ಭದಲ್ಲಿ ಮಹಿಳಾ ಎಸ್ ಐ ಒಬ್ಬರಿಗೆ ಮಹಿಳೆಯರಿಬ್ಬರು ಹಲ್ಲೆ ನಡೆಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.


    ಮಾರ್ಚ್ 1 ರಂದು ಈ ಘಟನೆ ನಡೆದಿದ್ದು, ಪುತ್ತೂರು ಮಹಿಳಾ ಠಾಣಾ ಎಸ್.ಐ ಸೇಸಮ್ಮ ಮೇಲೆ ಹಲ್ಲೆ ನಡೆಸಿದ ಇಬ್ಬರು ಮಹಿಳಾ ಆರೋಪಿಗಳಾದ ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿ’ಸೋಜ ಅವರ ಪತ್ನಿ ಬೇಬಿ ಡಿಸೋಜ(34) ಮತ್ತು ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ(35) ಎಂದು ಗುರುತಿಸಲಾಗಿದೆ.

    ಸಂಬಂಧಿಗಳಾದ ಸುನಿತಾ ಡಿ’ಸೋಜಾ ಹಾಗೂ ಬೇಬಿ ಡಿಸೋಜಾ ಎಂಬಿಬ್ಬರು, ಒಬ್ಬರಿಗೊಬ್ಬರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಬೇಬಿ ಡಿಸೋಜ ಅವರ ಅಕ್ಕ, ಹಾಸನದಲ್ಲಿರುವ ಆಶಾ ಅವರ ಜೊತೆಗೂಡಿ ಬಂದಿದ್ದರು. ಕೌಟುಬಿಕ ಕಲಹದ ಈ ಅರ್ಜಿಯನ್ನುಎಸ್.ಐ ಅವರು ನಯವಾಗಿ ವಿಚಾರಿಸುತ್ತಿರುವಾಗ ಬೇಬಿ ಡಿಸೋಜಾ ಅವರ ಪತಿ ಲಾರೆನ್ಸ್ ಡಿ’ಸೋಜಾ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ ತಡೆಯಲು ಬಂದ ಎಸ್.ಐ ಸೇಸಮ್ಮ ಅವರ ಮೇಲೆ ಬೇಬಿ ಡಿಸೋಜ ಮತ್ತು ಆಕೆಯ ಅಕ್ಕ ಆಶಾ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬೇಬಿ ಡಿಸೋಜ ಮತ್ತು ಆಶಾ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply