MANGALORE
ವೀರ ಸಾವರ್ಕರ್ ಬ್ಯಾನರ್ ಹಾಕಿದವರನ್ನು ಕೂಡಲೇ ಬಂಧಿಸಿ – ಯು.ಟಿ ಖಾದರ್

ವೀರ ಸಾವರ್ಕರ್ ಬ್ಯಾನರ್ ಹಾಕಿದವರನ್ನು ಕೂಡಲೇ ಬಂಧಿಸಿ – ಯು.ಟಿ ಖಾದರ್
ಮಂಗಳೂರು, ಜೂ. 03: ಪಂಪ್ ವೆಲ್ ಮೆಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರಿನ ಬ್ಯಾನರ್ ಹಾಕಿದವರನ್ನು ಹಾಗೂ ಅದನ್ನು ಪ್ರಿಂಟ್ ಮಾಡಿದವರನ್ನು ಬಂಧಿಸಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಸೇತುವೆಗಳು ಊರುಗಳನ್ನು ಜೋಡಿಸುತ್ತವೆ. ಆದರೆ ಸೇತುವೆಗೆ ಊರುಗಳನ್ನು ವಿಭಜಿಸುವವರ ಹೆಸರನ್ನು ಇಡಬಾರದು, ಈಗಾಗಲೇ ಪಂಪ್ ವೆಲ್ ಪ್ಲೈಓವರ್ ಜಾಗದಲ್ಲಿ ಮಹಾವೀರ ಸರ್ಕಲ್ ಅಂತ ಹೆಸರಿದೆ. ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸ ಗೊತ್ತಿಲ್ಲದೆ ಇರುವ ಜನರಿಂದ ಈ ವಿವಾದ ಉಂಟಾಗಿದೆ ಎಂದರು.

ಹಾಗೆಯೇ ಇಂದಿರಾ ಗಾಂಧಿ ಸರ್ಕಾರ ಸಾವರ್ಕರ್ ಸ್ಟ್ಯಾಂಪ್ ತಂದಿದ್ದರು. ಬಿಜೆಪಿ ಯಾಕೆ ಈಗ ಆ ಸ್ಟ್ಯಾಂಪ್ ಬಳಸುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಯ ಕುರಿತಾಗಿ ಮಾತನಾಡಿದ ಅವರು, ದ.ಕ ಜಿಲ್ಲೆಗೆ ಈಗ ಸರ್ಕಾರಿ ಆಸ್ಪತ್ರೆಯಿಲ್ಲ. ಇದ್ದ ಒಂದು ಸರ್ಕಾರಿ ಆಸ್ಪತ್ರೆ ವೆನ್ಲಾಕ್ ಆದರೆ ಯಾವುದೇ ಮಾಹಿತಿ ನೀಡದೆ ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡಿದ್ದಾರೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸಲಾಗದೆ ಜರನು ಬಡವರ್ಗದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ರೀತಿ ಮಂಗಳೂರಲ್ಲ ಬೆಂಗಳೂರಿನಲ್ಲಿ 10 ಸರ್ಕಾರಿ ಆಸ್ಪತ್ರೆ ಇದೆ. ಮಂಗಳೂರಿನಲ್ಲಿ ಒಂದೇ ಸರ್ಕಾರಿ ಆಸ್ಪತ್ರೆ ಇರುವುದು. ಹಾಗಾಗಿ ವೆನ್ಲಾಕ್‌ನಲ್ಲಿ ಕೂಡಲೇ ಒಪಿಡಿ ಆರಂಭ ಮಾಡಬೇಕು. ದ. ಕ ಜಿಲ್ಲಾಡಳಿತ ಬಡವರ ಕಷ್ಟವನ್ನು ಅರಿಯಬೇಕು ಎಂದು ಒತ್ತಾಯಿಸಿದರು.