Connect with us

    LATEST NEWS

    ಅಂಗಾರಕ ಸಂಕಷ್ಟಿ ಪುಣ್ಯದಿನ 18 ಬಗೆಯ 5 ಲಕ್ಷಕ್ಕೂ ಅಧಿಕ ಹೂಗಳಿಂದ ಶೃಂಗಾರಗೊಂಡ ಶರವು ದೇವಸ್ಥಾನ

    ಅಂಗಾರಕ ಸಂಕಷ್ಟಿ ಪುಣ್ಯದಿನ 18 ಬಗೆಯ 5 ಲಕ್ಷಕ್ಕೂ ಅಧಿಕ ಹೂಗಳಿಂದ ಶೃಂಗಾರಗೊಂಡ ಶರವು ದೇವಸ್ಥಾನ

    ಮಂಗಳೂರು ಸೆಪ್ಟೆಂಬರ್ 17: ಇಂದು ಅಂಗಾರಕ ಸಂಕಷ್ಟಿಯ ಪುಣ್ಯ ದಿನ..2019ರ ಏಕೈಕ ಅಂಗಾರಕ ಸಂಕಷ್ಟಿ ವೃತಾಚರಣೆ ಇಂದಾಗಿದ್ದು,ಗಣಪತಿ ದೇವಸ್ಥಾನಗಳು ಭಕ್ತ ಜನರಿಂದ ತುಂಬಿ ಹೋಗಿತ್ತು. ವಿಶೇಷ ವಾಗಿ ಮಂಗಳೂರಿನ ಇತಿಹಾಸ ಪ್ರಸಿದ್ದ ಶರವು ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಅಂಗಾರ ಸಂಕಷ್ಟಿ ದಿನದ ವೈಭವ ಇಲ್ಲಿದೆ ನೋಡಿ

    ಮಂಗಳೂರಿನಲ್ಲಿ ಇಂದು ಅಂಗಾರಕ ಸಂಕಷ್ಟಿ ಸಂಭ್ರಮ, 2019ರ ಏಕೈಕ ಅಂಗಾರಕ ಸಂಕಷ್ಟಿ ವೃತಾಚರಣೆ ಇಂದಾಗಿದ್ದು,ಗಣಪತಿ ದೇವಸ್ಥಾನಗಳು ಭಕ್ತ ಜನರಿಂದ ತುಂಬಿ ಹೋಗಿತ್ತು. ಅದರಲ್ಲೂ ಮಂಗಳೂರಿನ ಇತಿಹಾಸ ಪ್ರಸಿದ್ದ ಶರವು ಮಹಾಗಮಪತಿ ದೇವಸ್ಥಾನದಲ್ಲಿ ವೈಭವ ಮೇಳೈಸಿತ್ತು.

    ಅಂಗಾರಕ ಸಂಕಷ್ಟಿ ಯ ಹಿನ್ನೆಲೆ ಯಲ್ಲಿ ಶರವು ದೇವಸ್ಥಾನವನ್ನು 18 ಬಗೆಯ 5 ಲಕ್ಷಕ್ಕಿಂದ ಅಧಿಕ ಹೂವುಗಳಿಂದ ಸಿಂಗರಿಸಲಾಗಿತ್ತು. 15 ವರ್ಷಗಳ ಬಳಿಕ ಈ ಅಂಗಾರಕ ಸಂಕಷ್ಟಿ ಬಂದಿದ್ದು, ಬೆಳಗ್ಗಿನಿಂದ ರಾತ್ರಿ ತನಕ ಜನ ಮಹಾಗಣಪತಿ ಯ ದರ್ಶನ ಮಾಡಿ ಕೃತಾರ್ಥರಾದರು.

    ಸಂಕಷ್ಟಿ ವೃತಾಚರಣೆಯಲ್ಲಿ ಪಾಲ್ಗೊಂಡವರಲ್ಲಿ ಮಹಿಳೆಯರೇ ಅಧಿಕವಾಗಿರೋದ್ರಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರೇ ಪಾಲ್ಗೊಂಡಿದ್ದರು. ಶರವು ಮಹಾಗಣಪತಿ ಯ ಪ್ರಧಾನ ಪ್ರಾಂಗಣದಿಂದ ಹಿಡಿದು,ದೇವಳದ ಹೊರಾಂಗಣ,ಒಳಾಂಗಣ, ಗಣಪತಿ ದೇವರ ಮಂಟಪ ಹೀಗೆ ಇಡೀ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು..ಪ್ರತಿ ಬಾರಿ ಸಂಕಷ್ಟಿ ಆಚರಿಸುವ ಭಕ್ತರು ಈ ಭಾರೀಯಂತೂ ವಿಶೇಷ ಅನುಭೂತಿಗೊಳಗಾದರು.

    ಜನ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸಂಕಷ್ಟಿ ವೃತಾಚರಣೆಯಲ್ಲಿ ಪಾಲ್ಗೊಂಡು,ಗಣಪತಿಯ ದರ್ಶನ ಮಾಡಿ ಕೃತಾರ್ಥರಾದರು..ಈ ವರ್ಷದಲ್ಲಿ ಬರುವ ಏಕೈಕ ಅಂಗಾರಕ ಸಂಕಷ್ಟಿ ದಿನ ಇಂದಾಗಿರೋದ್ರಿಂದ ಲಕ್ಷಾಂತರ ಮಂದಿ ಭಕ್ತರು ಶರವು ಮಹಾಗಣಪತಿಯ ದರ್ಶನ ಪಡೆದರು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply