Connect with us

    LATEST NEWS

    ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರಿ ಪುರಸ್ಕಾರಕ್ಕೆ ಲಾಭಿ ಮಾಡಿದ್ದು ಯಾರು ಗೊತ್ತಾ….?

    ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರಿ ಪುರಸ್ಕಾರಕ್ಕೆ ಲಾಭಿ ಮಾಡಿದ್ದು ಯಾರು ಗೊತ್ತಾ….?

    ಉಡುಪಿ ಸೆಪ್ಟೆಂಬರ್ 17: ಪ್ರಶಸ್ತಿಗಳು ಸಿಗಬೇಕಾದರೆ ಲಾಭಿ ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಲಾಬಿ ಮಾಡದೇ ಪ್ರಶಸ್ತಿ ಸಿಗೋದು ಸ್ವಲ್ಪ ಕಷ್ಟ ಸಾಧ್ಯ. ಆದರೂ ನರೇಂದ್ರ ಮೋದಿಯವರು ಪ್ರಧಾನಿ ಆದ ನಂತರ ಪದ್ಮ ಪುರಸ್ಕಾರಗಳಿಗೆ ಲಾಭಿ ನಿಂತು ಹೋಗಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರತಿಭಾನ್ವಿತರಿಗೆ ಮಾತ್ರ ಈಗ ಪದ್ಮಪುರಸ್ಕಾರಗಳು ದೊರೆಯುವಂತಾಗಿದೆ.

    ಪದ್ಮಪುರಸ್ಕಾರಗಳಿಗೆ ಲಾಭಿ ನಡೆಯುವುದಿಲ್ಲ ಎಂದು ತಿಳಿದರೂ ಕೂಡ ಕರ್ನಾಟಕದ ಒಬ್ಬರು ಲಾಭಿ ಮಾಡಿ ಪ್ರಶಸ್ತಿ ಪಡೆದಿದ್ದಾರೆ. ಅವರೇ ನಮ್ಮ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ. ಆದರೆ ತಿಮ್ಮಕ್ಕನಿಗೆ ಲಾಬಿ ಮಾಡಿದ್ದು ಯಾರು ಗೊತ್ತಾ? ಉಡುಪಿಯ ಅಂಬಲಪಾಡಿ ದೇವಸ್ಥಾನಕ್ಕೆ ಸಾಲುಮರದ ತಿಮ್ಮಕ್ಕ ಭೇಟಿ ಕೊಟ್ಟಾಗ ಈ ರಹಸ್ಯ ಬಯಲಾಗಿದೆ.

    ಮೂರು ವರ್ಷಗಳ ಹಿಂದೆ ತಿಮ್ಮಕ್ಕ ಉಡುಪಿಯ ಅಂಬಲಪಾಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರಲಿಲ್ಲ. ತಿಮ್ಮಕ್ಕನ ಸಾಕು ಮಗ ಉಮೇಶ ಮನಸ್ಸಿನಲ್ಲಿ ಈ ಬಗ್ಗೆ ಖೇದವಿತ್ತು. ಎಂತೆಂಥವರಿಗೆಲ್ಲಾ ಪದ್ಮಶ್ರೀ ಪ್ರಶಸ್ತಿ ಬಂದಾಗಿತ್ತು. ತಿಮ್ಮಕ್ಕನಂತಹಾ ಹಿರಿಯ ಜೀವಕ್ಕೆ ಪ್ರಶಸ್ತಿ ಸಿಗೋದು ಯಾವಾಗ? ಇದು ಉಮೇಶ್ ಗಿದ್ದ ನೋವು. ದೇವಸ್ಥಾನದ ಆಡಳಿತ ಮಂಡಳಿಯವರು ಅಂಬಲಪಾಡಿ ಮಹಾಕಾಳಿ ದೇವಿಗೆ ತೊಡಿಸಿದ ಸೀರೆಯನ್ನು ತಿಮ್ಮಕ್ಕನಿಗೆ ಪ್ರಸಾದವಾಗಿ ನೀಡಿದ್ದರು. ಈ ಸಂದರ್ಭದಲ್ಲಿ ಒಂದು ನಿರ್ಧಾರಕ್ಕೆ ಬಂದ ಉಮೇಶ್ ಒಂದು ವೇಳೆ ಪದ್ಮಶ್ರೀ ಪ್ರಶಸ್ತಿ ಬಂದ್ರೆ ಅದೇ ಸೀರೆ ಉಡಿಸಿ ತಿಮ್ಮಕ್ಕನನ್ನು ಅಂಬಲಪಾಡಿ ಮಹಾಕಾಳಿಯ ದೇವಿಯ ದರ್ಶನಕ್ಕೆ ಕರೆತರೋದಾಗಿ ಮನಸಲ್ಲೇ ಹರಕೆ ಹೊತ್ತಿದ್ದರು.

    ಇದೀಗ ಕಾಲ ಕೂಡಿಬಂದಿದೆ. ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರಶ್ತಸ್ತಿ ಒಲಿದು ಬಂದಿದೆ. ಹಾಗಾಗಿ ಸೋಮವಾರ ಉಡುಪಿ ಭೇಟಿಯ ಸಂದರ್ಭದಲ್ಲಿ ತಿಮ್ಮಕ್ಕನನ್ನು ಪುತ್ರ ಉಮೇಶ್ ದೇವಿಯ ದರ್ಶನಕ್ಕೆ ಕರೆದುಕೊಂಡು ಬಂದು ತಾಯಿಗೆ ಹೊತ್ತ ಹರಕೆ ತೀರಿಸಿ ವಾಪಾಸಾದರು. ದೇವಸ್ಥಾನಕ್ಕೆ ಬಂದಿದ್ದ ಸಂದರ್ಭ ಈ ಪದ್ಮಶ್ರೀ ರಹಸ್ಯವನ್ನೂ ಅವರೇ ಮಾಧ್ಯಮಗಳ ಜೊತೆ ಹೇಳಿಕೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply