Connect with us

FILM

ಮಾತಿನಮಲ್ಲಿ ಆ್ಯಂಕರ್ ಅನುಶ್ರೀ ಬರ್ತ್‌ಡೇಗೆ ಟೈಮ್‌ ಸ್ಕ್ವೇರ್‌ನಲ್ಲಿ ಫೋಟೋ ಡಿಸ್ಪ್ಲೇ!

ಮಂಗಳೂರು ಜನವರಿ 25: ಕರಾವಳಿ ಬೆಡಗಿ ಮಾತಿನ ಮಲ್ಲಿ ಆ್ಯಂಕರ್ ಅನುಶ್ರೀ ಅವರ ಹುಟ್ಟು ಹಬ್ಬ ಇಂದು. ಈ ಹಿನ್ನಲೆ ಅನುಶ್ರೀ ಪುನಿತ್ ರಾಜ್ ಕುಮಾರ್ ಅವರೊಂದಿಗೆ ಇರುವ ಪೋಟೋ ಒಂದು ಅಮೇರಿಕಾದ ಟೈಮ್‌ ಸ್ಕ್ವೇರ್‌ನಲ್ಲಿ ಡಿಸ್ ಪ್ಲೇ ಆಗಿದೆ.


ಅಮೇರಿಕದಲ್ಲಿ ಅತಿ ಹೆಚ್ಚು ಜನ ತಿರುಗಾಡೋ ಪ್ರದೇಶ ಹಾಗೂ ಅತಿ ಹೆಚ್ಚು ಪ್ರವಾಸಿಗರು ವಿಸಿಟ್ ಮಾಡೋ ಪ್ಲೇಸ್ ಕೂಡ ಆಗಿದೆ. ಕಮರ್ಷಿಯಲ್ ಹಾಗೂ ಎಂಟರಟೈನಮೆಂಟ್ ಹಬ್ ಅಂತಲೂ ಇದನ್ನ ಕರೆಯುತ್ತಾರೆ. ಅಂತಹ ಈ ಪ್ರೇಕ್ಷಣೀಯ ಸ್ಥಳದಲ್ಲಿ ಅಪ್ಪು ಮತ್ತು ಅನುಶ್ರೀ ಫೋಟೋವನ್ನ ಡಿಸ್ಪ್ಲೇ ಮಾಡಲಾಗಿದೆ.


ನಟಿ-ನಿರೂಪಕಿ ಅನುಶ್ರೀ ಜನ್ಮ ದಿನ ಇವತ್ತು. ಜನವರಿ-25 ರಂದು ಅನುಶ್ರೀ ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಾರೆ. ಆ ಒಂದು ಖುಷಿಯ ಕ್ಷಣದಲ್ಲಿ ಅನುಶ್ರೀ ಫ್ಯಾನ್ಸ್ ಇಲ್ಲಿ ಅಪ್ಪು ಜೊತೆಗಿನ ಅನುಶ್ರೀ ಫೋಟೋ ಡಿಸ್ಪ್ಲೇ ಮಾಡಿದ್ದಾರೆ. ಈ ಮೂಲಕ ಜನ್ಮ ದಿನದ ಶುಭಾಷಯ ತಿಳಿಸಲಾಗಿದೆ.


ಈ ಒಂದು ವಿಡಿಯೋ ನೋಡಿದ ಹಲವು ಅನುಶ್ರೀ ಅಭಿಮಾನಗಳು ಹುಟ್ಟುಹಬ್ಬದ ಶುಭಾಷಯಗಳನ್ನೂ ತಿಳಿಸಿದ್ದಾರೆ. ಒಟ್ಟಾರೆ , ಈ ವರ್ಷ ಅನುಶ್ರೀ ಜನ್ಮ ದಿನ ಸ್ಪೆಷಲ್ ಆಗಿದೆ ಅಂತಲೂ ಹೇಳಬಹುದು.

https://youtube.com/shorts/oyMX7fo0T7g

Share Information
Continue Reading
Advertisement
Click to comment

Leave a Reply

Your email address will not be published. Required fields are marked *