Connect with us

  DAKSHINA KANNADA

  ಅಕ್ಕನ ಉಳಿಸಲು ತಂಗಿ ತನ್ನ ಲಿವರ್ ದಾನ ಮಾಡಿದರೂ ವಿದಿಯಾಟ ಬೇರೆ ಇತ್ತು…!!

  ಪುತ್ತೂರು ಜನವರಿ 25: ಜಾಂಡಿಸ್ ನಿಂದಾಗಿ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನ ಜೀವ ಉಳಿಸಲು ತಂಗಿ ತನ್ನ ಲಿವರ್ ದಾನ ಮಾಡಿದ್ದರು, ವಿದಿ ಮಾತ್ರ ಅಕ್ಕನ ಪ್ರಾಣವನ್ನೆ ತೆಗೆದುಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.


  ಮೃತರುಪುತ್ತೂರು ನೆಹರು ನಗರದ ದಿ. ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(29). ಜನವರಿ 24 ರಂದು ಲಿವರ್‌ ವೈಫಲ್ಯದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಐಶ್ವರ್ಯ ಅವರಿಗೆ ಜಾಂಡೀಸ್‌ ಜ್ವರ ಬಾಧಿಸಿದ್ದು, ಮೊದಲು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಅವರ ಲಿವರ್‌ ಹಾನಿಯಾಗಿದ್ದು, ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಮಾಡಬೇಕೆಂದು ತಿಳಿಸಿದ್ದರು.

  ಐಶ್ವರ್ಯಾ ಅವರ ತಾಯಿ ಲಿವರ್ ದಾನ ಮಾಡಲು ಸಿದ್ಧರಿದ್ದರು, ಆದರೆ ಐಶ್ವರ್ಯಾ ಅವರ ತಂಗಿ ಅನುಷಾ ತನ್ನ ಸಹೋದರಿಯ ಜೀವ ಉಳಿಸಲು ತನ್ನ ಸ್ವಂತ ಲಿವರ್ ದಾನ ಮಾಡುವ ಧೈರ್ಯವನ್ನು ತೆಗೆದುಕೊಂಡರು. ಕಸಿ ಪ್ರಕ್ರಿಯೆಗಾಗಿ ಇಬ್ಬರೂ ಸಹೋದರಿಯರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಕೃತ್ತಿನ ಕಸಿ ಸಮಯದಲ್ಲಿ ಐಶ್ವರ್ಯಾ ಹೃದಯಾಘಾತಕ್ಕೆ ಒಳಗಾಗಿ ಜ.24ಕ್ಕೆ ಪ್ರಾಣಬಿಟ್ಟಿದ್ದು ಅಕ್ಕನನ್ನು ಉಳಿಸುವ ತಂಗಿಯ ಯತ್ನ ವಿಫಲವಾಗಿದೆ. ಇಂಜಿನಿಯರಿಂಗ್ ಪದವೀಧರರಾದ ಐಶ್ವರ್ಯಾ ಅವರ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಖರ್ಚಾಗಿದ್ದು ವೈದ್ಯಕೀಯ ವೆಚ್ಚವನ್ನು ಭರಿಸಲು ಸಹಾಯ ಮಾಡುವಂತೆ ಕುಟುಂಬಸ್ಥರು ಸಾಮಾಜಿಕ ಮಾಧ್ಯಮದ ಮೂಲಕ ಸಹಾಯವನ್ನು ಕೋರಿದ್ದರು. ಸದ್ಯ ತಂಗಿ ಅನುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply