Connect with us

    FILM

    ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಕ್ಯಾನ್ಸರ್ ಗೆ ಬಲಿ

    ಚೆನ್ನೈ ಜನವರಿ 26: ಭಾರತೀಯ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗಾಯಕಿ ಭವತಾರಿಣಿ ಕ್ಯಾನ್ಸರ್ ನಿಂದಾಗಿ ವಿಧಿವಶರಾಗಿದ್ದಾರೆ. ಕೆಲ ವರ್ಷಗಳಿಂದ ಅವರು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ಪಡೆಯುವುದಕ್ಕಾಗಿ ಅವರು ಶ್ರೀಲಂಕಾಗೆ ತೆರಳಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಶ್ರೀಲಂಕಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಗುತ್ತಿದೆ ಎಂದು ಅವರ ಪತಿ  ತಿಳಿಸಿದ್ದಾರೆ.


    ಇಳಯರಾಜ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಯುವನ್ ಶಂಕರ್ ರಾಜಾ ಮತ್ತು ಭವತಾರಿಣಿ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಯುವನ್ ಶಂಕರ್ ಸಂಗೀತ ನಿರ್ದೇಶಕರಾಗಿದ್ದರೆ ಭವತಾರಿಣಿ ಗಾಯಕಿ. ಮಾಯಿಲ್ ಪೋಲ ಪೊನ್ನು ಒನ್ನು ಚಿತ್ರಕ್ಕಾಗಿ ಇವರಿಗೆ ರಾಷ್ಟ್ರೀಯ ಪುರಸ್ಕಾರ ಕೂಡ ಲಭಿಸಿತ್ತು.


    ತಂದೆ ಇಳಯರಾಜ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಭಾರತದ ಮೊದಲ 3ಡಿ ಸಿನಿಮಾ ‘ಮೈ ಡಿಯರ್ ಕುಟ್ಟಿಚಾತನ್’ ಸಿನಿಮಾದಲ್ಲಿ ಭವತಾರಿಣಿ ಮೊದಲ ಬಾರಿಗೆ ಹಾಡಿದರು. ನಂತರ ಪೂರ್ಣಪ್ರಮಾಣದಲ್ಲಿ ಅವರು ಗಾಯಕಿಯಾಗಿ ಗುರುತಿಸಿಕೊಂಡಿದ್ದು ‘ರಾಸೈಯ್ಯ’ ಸಿನಿಮಾದ ಮೂಲಕ. ಅಲ್ಲಿಂದ ಇಳಯರಾಜ ಸಂಗೀತ ನೀಡಿದ ಹಲವು ಸಿನಿಮಾಗಳಲ್ಲಿ ಭವತಾರಿಣಿ ಹಾಡಿದರು. ಅಷ್ಟೇ ಅಲ್ಲ, ಸಹೋದರರಾದ ಕಾರ್ತಿಕ್ ರಾಜ ಮತ್ತು ಯುವನ್ ಶಂಕರ್ ರಾಜ ಅವರ ಸಂಗೀತ ನಿರ್ದೇಶನದಲ್ಲೂ ಹಲವು ಗೀತೆಗಳಿಗೆ ಭವತಾರಿಣಿ ಧ್ವನಿಯಾದರು.

    ಮಾಜಿ ಪತ್ರಕರ್ತ ಎಸ್ ಎನ್ ರಾಮಚಂದ್ರನ್ ಅವರ ಪುತ್ರ ಆರ್‌ ಶಬರಿರಾಜ್ ಅವರನ್ನು ಭವತಾರಿಣಿ ಮದುವೆಯಾಗಿದ್ದರು. ತಮ್ಮ ಶಿಕ್ಷಣವನ್ನೆಲ್ಲ ಅವರು ಚೆನ್ನೈನಲ್ಲೇ ಪಡೆದುಕೊಂಡಿದ್ದರು. ಭವತಾರಿಣಿ ಅವರ ನಿಧನವರು ಅವರ ಕುಟುಂಬ ಸದಸ್ಯರಿಗೆ, ತಮಿಳು ಚಿತ್ರರಂಗಕ್ಕೆ ತೀವ್ರ ಆಘಾತವನ್ನು ಉಂಟು ಮಾಡಿದೆ. 2000ರಲ್ಲಿ ತೆರೆಕಂಡ ‘ಭಾರತಿ’ ತಮಿಳು ಸಿನಿಮಾದ ‘ಮಯಿಲ್ ಪೊಲಾ ಪೊನ್ನು ಒನ್ನು..’ ಎಂಬ ಗೀತೆಯನ್ನು ಭವತಾರಿಣಿ ಹಾಡಿದ್ದರು. ಇದನ್ನು ಸಂಯೋಜಿಸಿದ್ದ ಇಳಯರಾಜ. ಈ ಹಾಡನ್ನು ಹಾಡಿದ್ದಕ್ಕಾಗಿ ಅತ್ಯುತ್ತಮ ಗಾಯಕಿ ರಾಷ್ಟ್ರ ಪ್ರಶಸ್ತಿಯು ಭವತಾರಿಣಿಗೆ ಲಭಿಸಿತ್ತು. ತಮಿಳಿನಲ್ಲಿ ಮಾತ್ರದಲ್ಲಿ ಬೇರೆ ಬೇರೆ ಭಾಷೆಗಳಲ್ಲೂ ಭವತಾರಿಣಿ ಹಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply