ಕಿರಿಕ್ ಬೆಡಗಿ ರಶ್ಮಿಕಾಗೆ ಅಮೇರಿಕಾ ಅಭಿಮಾನಿಯ ಪುಟ್ಟ ಪತ್ರ!

ಬೆಂಗಳೂರು, ಫೆಬ್ರವರಿ 11 :”ನಾನೆಂದು ಭೇಟಿಯಾಗುವೆನೋ ಆಗ ನಿಮ್ಮನ್ನು ನಾನು ತಬ್ಬಿಕೊಳ್ಳಬೇಕು ಎನಿಸಿದೆ” ಹೀಗೆಂದು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಯೊಬ್ಬ ಪತ್ರ ಬರೆದಿರುವುದು ಈಗ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. 

ಅಮೆರಿಕಾ ರಶ್ಮಿಕಾ ಮಂದಣ್ನ ಫ್ಯಾನ್ ಕ್ಲಬ್ ತನ್ನ ಟ್ವೀಟ್ ನಲ್ಲಿ ಪುಟ್ಟ ಅಭಿಮಾನಿಯ ಈ ಪತ್ರವನ್ನು ಹಂಚಿಕೊಂಡಿದೆ. “ರಶ್ಮಿಕಾ ಅವರಿಗೆ ನ್ಯೂಯಾರ್ಕ್ ನ ಪುಟ್ಟ ಅಭಿಮಾನಿಯೊಬ್ಬರು ಚಿಕ್ಕ ಪತ್ರವನ್ನು ಬರೆದಿದ್ದಾರೆ. ಆತನಿಗೆ ಇನ್ನೂ 8 ವರ್ಷ. ನೀವು ಅವನ ಮೊದಲ ಕ್ರಶ್ ಆಗಿದ್ದೀರಿ. ಅವನು ನೀವು ಅಭಿನಯಿಸಿದ “ಗೀತ ಗೋವಿಂದಂ” ಚಿತ್ರ ನೋಡಿದ್ದು ಅದರ ಹಾಡುಗಳನ್ನು ವೀಕ್ಷಿಸಿದ್ದಾನೆ. ಅವನಿಗೆ ನಿಮ್ಮನ್ನು ಭೇಟಿಯಾಗಬೇಕು, ಹಾಯ್ ಹೇಳಬೇಕೆಂದು ಭಾರೀ ಆಸೆ ಇದೆ” ಫ್ಯಾನ್ ಕ್ಲಬ್ ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿ ಹೇಳಿದೆ.
“ನೀವೊಬ್ಬ ಅದ್ಭುತ ಮಹಿಳೆ, ನಿಮ್ಮ ನಟನೆ ನನಗೆ ತುಂಬಾ ಇಷ್ಟ. ನಿಮ್ಮ ಮುಖ ಬಹಳ ಕ್ಯೂಟ್ ಆಗಿದೆ. ನನಗೆ ನಿಮ್ಮ ಸಿನಿಮಾಗಳು, ಹಾಡುಗಳು ಇಷ್ಟ. ನಿಮ್ಮ “ಗೀತ ಗೋವಿಂದಂ” ಚಿತ್ರ ನೋಡಿ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ಕಲಿತೆ.ನಿಮ್ಮ ಚಿತ್ರದ ಹಾಡು ಕೇಳಲು ನನಗೆ ಖುಷಿ ಇದೆ.ಅವು ಬಹಳ ಶಾಂತಿಯುತವಾಗಿರಲಿದೆ. ನನಗೆ “ಗೀತ ಗೋವಿಂದಂ” ಚಿತ್ರ ಬಹಳ ಇಷ್ಟವಾಗಿದೆ. ನೀವಿನ್ನು ಬಹಳ ಚಿತ್ರದಲ್ಲಿ ನಟಿಸುತ್ತೀರಿ ಎನ್ನುವುದು ನನಗೆ ಗೊತ್ತು.ನಾನೊಮ್ಮೆ ನಿಮ್ಮನ್ನು ಭೇಟಿಯಾದರೆ ನಿಮ್ಮನ್ನು ತಬ್ಬಿಕೊಳ್ಳಬೇಕು ಎಂದಿದ್ದೇನೆ” ಪತ್ರದಲ್ಲಿ ಪುಟ್ಟ ಅಭಿಮಾನಿ ತನ್ನ ಆಸೆ ವ್ಯಕ್ತಪಡಿಸಿದ್ದಾನೆ.