Connect with us

FILM

ಪ್ಯಾರಿಸ್ ನಲ್ಲಿ ಶ್ವೇತವರ್ಣದ ಗೌನ್ ನಲ್ಲಿ ಮಿಂಚಿದ ಐಶ್ವರ್ಯ ರೈ

ಪ್ಯಾರಿಸ್ : ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟಿ ಐಶ್ವರ್ಯ ರೈ ತಮ್ಮ ಶ್ವೇತವರ್ಣ ಡ್ರೇಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.


ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಲೋರಿಯಲ್ ಪ್ಯಾರಿಸ್ ಆಯೋಜಿಸಿರುವ ‘ಪ್ಯಾರಿಸ್ ಫ್ಯಾಷನ್ ವೀಕ್‌’ನಲ್ಲಿ ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯೂ ಆಗಿರುವ 47 ವರ್ಷದ ನಟಿ ಐಶ್ವರ್ಯ ರೈ ಬಚ್ಚನ್, ಶ್ವೇತ ವರ್ಣದ ಗೌನ್ ಧರಿಸಿ ರಾಂಪ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.


ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಗಳು ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದು, ಬ್ರಿಟಿಷ್ ನಟಿ ಹೆಲೆನ್ ಮಿರನ್ ಮತ್ತು ಕ್ಯಾಮಿಲಾ ಕಾಬೆಲೊ ಜತೆ ಐಶ್ವರ್ಯ ಹೆಜ್ಜೆ ಹಾಕಿದ್ದು, ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಪ್ಯಾರಿಸ್ ಫ್ಯಾಷನ್ ವೀಕ್‌ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಐಫೆಲ್ ಟವರ್ ಬಳಿ ಪ್ಯಾಷನ್ ವೀಕ್ ಆಯೋಜಿಸಲಾಗಿದ್ದು, ಹಾಲಿವುಡ್‌ನ ಖ್ಯಾತ ನಟ-ನಟಿಯರ ದಂಡೇ ಅಲ್ಲಿ ಸೇರಿದೆ.