Connect with us

KARNATAKA

ಆಧಾರ್ ಕಾರ್ಡ್: ಮೊಬೈಲ್ ನಂಬರ್ ಬದಲಾವಣೆ, ಹೊಸ ಸೇರ್ಪಡೆ ಬಗ್ಗೆ ನಿಮಗೆ ತಿಳಿದಿದೆಯೇ?

ಬೆಂಗಳೂರು : ಹೌದು ಇದೀಗ  ಆನ್‌ಲೈನ್ ಮೂಲಕವೇ ನಿಮ್ಮ ಆಧಾರ್‌ಗೆ ಮೊಬೈಲ್ ನಂಬರ್ ಜೋಡಿಸಬಹುದು. ಇಲ್ಲವೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಬಹುದು. ಮೊಬೈಲ್ ನಂಬರ್ ದೃಢೀಕರಣ, ಬದಲಾವಣೆಯನ್ನು ಕೂಡ ಮಾಡಬಹುದು.ಆಧಾರ್ ಎನ್ನುವುದು 12 ಅಂಕಿಗಳ ವಿಶಿಷ್ಟ ನಂಬರ್. ಆಧಾರ್ ಕಾರ್ಡ್ ಇಂದು ನಮಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳಿಗೆ ಬೇಕಾಗುತ್ತದೆ. ಅದರಲ್ಲೂ ಸಬ್ಸಿಡಿ ಪಡೆಯಲು, ಸರಕಾರದ ಸೌಲಭ್ಯ, ಸವಲತ್ತು ಬೇಕಾದರೆ ಆಧಾರ್ ಕಡ್ಡಾಯವಾಗಿರಬೇಕು. ಇಲ್ಲವಾದರೆ ಸಮಸ್ಯೆ ಎದುರಾಗುತ್ತದೆ. ಆಧಾರ್ ಜತೆಗೇ ನಿಮ್ಮ ಗುರುತಿನ ವಿವರ, ಕಣ್ಣು ಮತ್ತು ಬೆರಳಚ್ಚಿನ ದಾಖಲೆ ಇರುವುದರಿಂದ, ಹಲವು ಸಂದರ್ಭದಲ್ಲಿ ಅದನ್ನು ಬಳಸಲು ಅಡ್ಡಿಯಿಲ್ಲ.

ಆದರೆ ಆಧಾರ್ ಕುರಿತು ಇನ್ನೂ ಬಹಳಷ್ಟು ಜನರಿಗೆ ಸಂಶಯವಿದೆ ಮತ್ತು ಅದರ ಬಳಕೆ ಕುರಿತು ತಿಳಿದಿಲ್ಲ. ಅಲ್ಲದೆ, ಆನ್‌ಲೈನ್ ಮೂಲಕವೇ ನಿಮ್ಮ ಆಧಾರ್‌ಗೆ ಮೊಬೈಲ್ ನಂಬರ್ ಜೋಡಿಸಬಹುದು. ಇಲ್ಲವೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಬಹುದು. ಮೊಬೈಲ್ ನಂಬರ್ ದೃಢೀಕರಣ, ಬದಲಾವಣೆಯನ್ನು ಕೂಡ ಮಾಡಬಹುದು.

ಆಧಾರ್ ಜತೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ?
ಇಲ್ಲಿ ಹೇಳಿರುವ ಕ್ರಮಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಂಬರ್ ಜತೆಗೆ ಆಧಾರ್ ಲಿಂಕ್ ಮಾಡಬಹುದುನಿಮ್ಮ

  • ಮೊಬೈಲ್‌ನಿಂದ 14546 ಡಯಲ್ ಮಾಡಿ.
  • ಈಗ ಬರುವ ಆಯ್ಕೆಯಲ್ಲಿ ಇಂಡಿಯನ್ ಮತ್ತು ಎನ್‌ಆರ್‌ಐ ಎಂದಿರುತ್ತದೆ.
  • ನಂತರ, ಆಧಾರ್ ಲಿಂಕ್ ಮಾಡಲು ನಿಮ್ಮ ಅನುಮತಿಯನ್ನು ನೀಡಿ. ಅದಕ್ಕೆ 1ನ್ನು ಒತ್ತಿ.
  • ಈಗ, ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ಎಂಟರ್ ಮಾಡಿ, ಬಳಿಕ 1 ಒತ್ತುವ ಮೂಲಕ ಕನ್ಫರ್ಮ್ ಮಾಡಿ.

​ಆಧಾರ್ ಜತೆಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ದೃಢಪಡಿಸುವುದು ಹೇಗೆ?
ನಿಮ್ಮ ಆಧಾರ್ ಸಂಖ್ಯೆಯ ಜತೆಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ದೃಢಪಡಿಸಿಕೊಳ್ಳಲು ನೀವು ಆಧಾರ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಅದರಲ್ಲಿ https://uidai.gov.in/ ಓಪನ್ ಮಾಡಿ, ವೆರಿಫೈ ಇ ಮೇಲ್/ಮೊಬೈಲ್ ನಂಬರ್ ಎಂದಿರುವುದನ್ನು ಕ್ಲಿಕ್ ಮಾಡಿ. ಅಲ್ಲಿ ಕೇಳಿರುವ ವಿವರ ದಾಖಲಿಸಿ, ಮೊಬೈಲ್ ನಂಬರ್ ಲಿಂಕ್ ಆಗಿರುವುದನ್ನು ದೃಢಪಡಿಸಿಕೊಳ್ಳಬಹುದು. ಅಲ್ಲದೆ, ಹೊಸ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಬೇಕಿದ್ದಲ್ಲಿ, ಆಧಾರ್ ಕೇಂದ್ರಕ್ಕೆ ತೆರಳಬೇಕು.

​ಒಂದೇ ಮೊಬೈಲ್ ನಂಬರ್‌ಗೆ ಎರಡು ಆಧಾರ್
ಒಂದು ಮೊಬೈಲ್ ನಂಬರ್‌ಗೆ ಎರಡು ಅಥವಾ ಹೆಚ್ಚಿನ ಆಧಾರ್ ಲಿಂಕ್ ಮಾಡಬಹುದು. ಅಂದರೆ ನಿಮ್ಮ ಮಕ್ಕಳ ಆಧಾರ್ ಅನ್ನು ಕೂಡ ನಿಮ್ಮ ನಂಬರ್‌ಗೆ ಜೋಡಿಸಬಹುದು. ಇಲ್ಲವೆ, ಮನೆಯಲ್ಲಿ ಒಂದೇ ಮೊಬೈಲ್ ಇದ್ದು, ಇಬ್ಬರು ಸದಸ್ಯರು ಇದ್ದರೆ, ಅಲ್ಲಿಯೂ ಈ ಅವಕಾಶವಿದೆ.ಆಧಾರ್ ಅಪ್‌ಡೇಟ್ ಆಗಲು ಎಷ್ಟು ಸಮಯ ಬೇಕಾಗುತ್ತದೆ?
ಸಾಧಾರಣವಾಗಿ ಆಧಾರ್ ಕಾರ್ಡ್ ಜತೆಗೆ ಮೊಬೈಲ್ ನಂಬರ್ ಅಪ್‌ಡೇಟ್ ಆಗಲು 90 ದಿನ ಸಮಯಾವಕಾಶ ಬೇಕಾಗುತ್ತದೆ ಎಂದು ಆಧಾರ್ ಪ್ರಾಧಿಕಾರ ಹೇಳಿದೆ. ಹೊಸ ಮೊಬೈಲ್ ನಂಬರ್ ಸೇರಿಸಲು ಮೊದಲ ಬಾರಿಗೆ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಆದರೆ ನಂತರದಲ್ಲಿ ಮಾತ್ರ ಅಪ್‌ಡೇಟ್ ಮಾಡುವುದಿದ್ದಲ್ಲಿ, ಆನ್‌ಲೈನ್ ಮೂಲಕ ಮಾಡಬಹುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *