Connect with us

FILM

ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ – ತುಪ್ಪದ ಬೆಡಗಿ ರಾಗಿಣಿ ಆರೆಸ್ಟ್

ಬೆಂಗಳೂರು ಸೆಪ್ಟೆಂಬರ್ 4: ಸ್ಯಾಂಡಲ್ ವುಡ್ ನ ಡ್ರಗ್ ಮಾಫಿಯಾ ಸಂಬಂಧ ನಟಿ ರಾಗಿಣಿ ದ್ವಿವೇದಿಯವರನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ.


ಈಗಾಗಲೇ ರಾಜ್ಯಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾದಲ್ಲಿ ಮೊದಲ ಬಾರಿಗೆ ನಟಿಯೊಬ್ಬರು ಬಂಧನವಾಗಿದೆ. ಇಂದು ಬೆಳಿಗ್ಗೆ ಸಿಸಿಬಿ ಪೊಲೀಸರು ರಾಗಿಣಿ ಅಪಾರ್ಟ್ ಮೆಂಟ್ ಗೆ ತೆರಳಿ ಸಂಪೂರ್ಣ ತಪಾಸಣೆ ನಡೆಸಿದ್ದರು. ನಂತರ ಅವರನ್ನು ವಶಕ್ಕೆ ಪಡೆದು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದರು.


ಈ ನಡುವೆ ನಟಿ ರಾಗಿಣಿ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಸ್ವಯಂಪ್ರೇರಿತ ದೂರನ್ನು ಪೊಲೀಸರು ದಾಖಲಿಸಿದ್ದರು. ಇದೀಗ ರಾಗಿಣಿ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾದ ಎರಡನೇ ಆರೋಪಿ ರಾಗಿಣಿ ಆಗಿದ್ದಾರೆ.

Facebook Comments

comments