FILM
ಈ ಬಾಲಿವುಡ್ ನಟಿಯ ಹಾರ್ಟ್ ಬ್ರೋಕನ್ ….!!
ಮುಂಬೈ : ಸೆಲೆಬ್ರೆಟಿ ಜೀವನ, ಸಿನೆಮಾ ಸಹವಾಸವೇ ಬೇಡ ಎಂದು ಇತ್ತೀಚೆಗಷ್ಟೇ ಬಾಲಿವುಡ್ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಮುಸ್ಲಿಂ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಹಾರ್ಟ್ ಬ್ರೋಕನ್ ಅಂತ ಹೇಳಿದ್ದಾರೆ.
ನಟನೆ, ಸಿನಿಮಾ, ಶೋಬೀಸ್ ಬೇಡ ಎಂದು ಮುಸ್ಲಿಂ ಧರ್ಮಗುರುವನ್ನು ಮದುವೆಯಾದ ಸನಾ ಖಾನ್ ಕೆಲವರು ನನ್ನ ಹಿಂದಿನ ದಿನಗಳನ್ನು ಕೆದಕೋಕೆ ಪ್ರಯತ್ನಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿತ್ರರಂಗ ಬೇಡ ಎಂದು ಮದುವೆಯಾಗಿದ್ದ ಸನಾ ಖಾನ್ ರ ಬಗ್ಗೆ ಕೆಲವರು ನೆಗೆಟಿವ್ ವಿಡಿಯೋ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು ಇದರಿಂದ ತಮ್ಮ ಮನಸು ಒಡೆದು ಹೋಯ್ತು ಎಂದು ಹೇಳಿದ್ದಾರೆ.
ನಟಿ ಸನಾ ಖಾನ್ ಅಲ್ಲಾ ನನಗೆ ಎಲ್ಲಾವನ್ನು ಕೊಟ್ಟಿದ್ದಾನೆ. ಇದೀಗ ನಾನು ಸಮಾಜಕ್ಕೆ ಕೊಡುವ ಸಮಯ ಬಂದಿದೆ ಎಂದು ನಟಿ ದಿಢೀರ ಅಂತಾ ವೃತ್ತಿ ಜೀವನಕ್ಕೆ ಸಲಾಂ ಹೊಡೆದು ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ರನ್ನು ಮದುವೆಯಾಗಿದ್ದರು.
You must be logged in to post a comment Login