Connect with us

    FILM

    ನಟಿ ರಮ್ಯಾ ಅವರ ಮುದ್ದಿನ ನಾಯಿ ನಾಪತ್ತೆ…ಹುಡುಕಿಕೊಡಿ ಎಂದು ಮನವಿ ಮಾಡಿದ ನಟಿ

    ಬೆಂಗಳೂರು ಮೇ 06: ಕನ್ನಡದ ಖ್ಯಾತ ನಟಿ ರಮ್ಯಾ ಅವರ ಸಾಕು ನಾಯಿ ನಾಪತ್ತೆಯಾಗಿದ್ದು, ಚುನಾವಣೆ ಪ್ರಚಾರದಲ್ಲಿದ್ದ ಅವರು ವಿಚಾರ ತಿಳಿಯುತ್ತಿದ್ದಂತೆ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದಾರೆ.
    ಬಬಲೇಶ್ವರ ಹೊರತುಪಡಿಸಿ ಅವರು ಎಲ್ಲಾ ಪ್ರಚಾರವನ್ನು ರದ್ದುಗೊಳಿಸಿ ವಾಪಾಸ್ಸಾಗುತ್ತಿದ್ದಾರೆ. ನಾಯಿ ಕಳೆದು ಹೋಗಿರುವ ವಿಚಾರ ತಿಳಿದ ಬಳಿಕ ರಮ್ಯಾ ತೀವ್ರವಾಗಿ ನೊಂದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


    ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಅವರು ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ.


    ನಾಯಿ ಕಾಣೆಯಾಗಿರುವ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಮೇ 6 ರಿಂದ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply