Connect with us

  DAKSHINA KANNADA

  ಮೇ 8 ಕ್ಕೆ ಸ್ಯಾಂಡಲ್ವುಡ್ ಕ್ವೀನ್ ರಮ್ಯ ಪುತ್ತೂರಿಗೆ…

  ಪುತ್ತೂರು, ಮೇ 06: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಮೇಲ್ಪಟ್ಟು ಮನೆ ಮನೆ ಭೇಟಿ ಕಾರ್ಯಕ್ರಮ “ನನ್ನ ಬೂತ್ ನಾನು ಅಭ್ಯರ್ಥಿ” ಕಾರ್ಯಕ್ರಮ ನಡೆಯುತ್ತಿದ್ದು, ಮೇ 8ಕ್ಕೆ ಕಾಂಗ್ರೆಸ್ ಮತಯಾಚನೆ ರಾಲಿಯು ಪುತ್ತೂರಿನ ಬೊಳುವಾರಿನಿಂದ ದರ್ಬೆ ತನಕ ನಡೆಯಲಿದ್ದು ಚಿತ್ರ ನಟಿ ರಮ್ಯಾ ಅವರು ರಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

  ಈ ಬಾರಿಯ ಚುನಾವಣೆಯಲ್ಲಿ ನಾವು ಬಹುಮತದಿಂದ ಗೆದ್ದು ಬರುವ ಆತ್ಮವಿಶ್ವಾಸವಿದೆ. ರ್ರೃೃ ರಾಲಿಯಲ್ಲಿ ಸುಮಾರು 25 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದ ಅವರು ಮೇ 7 ಕ್ಕೂ ವಿಟ್ಲ, ಉಪ್ಪಿನಂಗಡಿಯಲ್ಲೂ ರಾಲಿ ನಡೆಯಲಿದೆ ಎಂದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ್ ರೈ ಕೋಡಿಂಬಾಳ, ವಕ್ತಾರ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  ಅಭಿವೃದ್ಧಿ ಯೋಜನೆ ಮುಂದಿಟ್ಟು ಮತ ಯಾಚನೆ: ಚುನಾವಣಾ ಸಂದರ್ಭದಲ್ಲಿ ನಮ್ಮ ಪಕ್ಷ ಪ್ರಣಾಳಿಕೆ ನೀಡಿದೆ. ಅದರಂತೆ ಪ್ರಣಾಳಿಯ ಎಲ್ಲಾ ಭರವಸೆ ಈಡೇರಿಸುವ ಜೊತೆಗೆ ಪುತ್ತೂರಿಗೆ ಮೆಡಿಕಲ್ ಕಾಲೇಜು, ಕುಡಿಯುವ ನೀರು, ಕೊಯಿಲದಲ್ಲಿ ಎನಿಮಲ್ ಹಬ್, ಪೊಲ್ಟಿ ಇಂಡಸ್ಟ್ರೀಸ್, ಕುರಿಗಳ ಸಾಕಾಣಿಕೆ, 20 ಸಾವಿರ ಉದ್ಯೋಗವಕಾಶ ಮಾಡಲಿದ್ದೇವೆ. ಇದರ ಜೊತೆಗೆ ಪುತ್ತೂರಿನಲ್ಲಿ ಡ್ರೈನೇಜ್ ಪೆಸಿಲಿಟಿ, ನಗರದೊಳಗೆ ಕಟ್ ಕನ್ವರ್ಷನ್ ಸಮಸ್ಯೆ ಪರಿಹಾರ, 94 ಸಿಯಲ್ಲಿ ಬಾಕಿ 3800 ಪೈಲ್ ಪೆಡಿಂಗ್ ಆಗಿರುವುದಕ್ಕೆ ಕ್ರಮ ಮಾಡಲಿದ್ದೇವೆ.

  ಇದಕ್ಕೆಲ್ಲ ಜನಾಶೀರ್ವಾದ ಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು. ಭ್ರಷ್ಟಾಚಾರಕ್ಕೆ ಕಡಿವಾಣ: ಈ ಹಿಂದಿನ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು. ಆದರೆ ಶೇ. 100 ತಡೆಯಲು ಸಾದ್ಯವಿಲ್ಲ. ಆದರೂ ನಾನು ಭ್ರಷ್ಟಾಚಾರ ಆಗದಿದ್ದರೆ ಕಂಡಿತಾ ಭ್ರಷ್ಟಾಚಾರ ನಿಲ್ಲಿಸಬಹುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.

  Share Information
  Advertisement
  Click to comment

  You must be logged in to post a comment Login

  Leave a Reply