Connect with us

    FILM

    ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಗಾಯ

    ಹಾಸನ, ಮಾರ್ಚ್ 01: ‘ಹೀರೋ’  ಚಲನಚಿತ್ರದ ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ.

    ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಕೊಂಚವೇ ಯಾಮಾರಿದ್ದರೂ ಅವರ ಪ್ರಾಣಕ್ಕೆ ಅಪಾಯವಿತ್ತು. ಅದೃಷ್ಟವಶಾತ್ ನಟ ರಿಷಬ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ. ಗಾನಾವಿ ಲಕ್ಷ್ಮಣ್ ಅವರು ಹೀರೋ ಚಿತ್ರದ ನಾಯಕಿ ಪಾತ್ರದಲ್ಲಿದ್ದಾರೆ.​

    ಚಿತ್ರೀಕರಣಕ್ಕಾಗಿ ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆ ಈ ಬೆಂಕಿ ತಗುಲಿದೆ. ನಟ ರಿಷಬ್ ಶೆಟ್ಟಿ ತಲೆ ಕೂದಲು ಸುಟ್ಟು, ಬೆನ್ನಿಗೆ ಗಾಯವಾಗಿದೆ. ಜಿಲ್ಲೆಯ ಬೇಲೂರಿನಲ್ಲಿ ‘ಹೀರೋ’ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.ಹೀರೊ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟ

    Share Information
    Advertisement
    Click to comment

    You must be logged in to post a comment Login

    Leave a Reply