LATEST NEWS
ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾ ಯುವಕ ಅಪ್ಪಚ್ಚಿ!
ಛತ್ತೀಸ್‍ಗಢ್, ಮಾರ್ಚ್ 01 : ಕಾಡಾನೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ಆನೆ ಕಾಲಿನಡಿ ಸಿಲುಕಿ ಅಪ್ಪಚ್ಚಿಯಾಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢ್‍ನ ರಾಯಗಢದಲ್ಲಿ ನಡೆದಿದೆ.
ಮನೋಹರ್ ಪಟೇಲ್(21)ಮೃತ ಯುವಕ. ಈತ ತನ್ನ ಸ್ನೇಹಿತರೊಂದಿಗೆ ಸೇರಿ ಆನೆ ಜೊತೆಗೆ ಸೆಲ್ಫಿ ತೆಗೆಯುವ ಹುಚ್ಚಾಟಕ್ಕೆ ಬಲಿಯಾಗಿದ್ದಾನೆ.ಕಾಡಿನಿಂದ ಹಳ್ಳಿ ಕಡೆಗೆ ಆನೆ ಆಹಾರ ಹುಡುಕುತ್ತಾ ಬಂದಿದೆ. ಆಗ ತಾನೆ ಹೆಣ್ಣಾನೆ ತನ್ನ ಮರಿಯನ್ನು ಕಳೆದುಕೊಂಡಿದೆ.
ಹಳ್ಳಿಯ ಜನರು ಆನೆಯನ್ನು ನೋಡಲು ಸೇರಿದ್ದಾರೆ. ತನ್ನ ಮರಿಯಿಂದ ದೂರವಾಗಿ ಮೊದಲೇ ರೋಷದಿಂದ ಆನೆ ಅಡ್ಡಾಡುತ್ತಿತ್ತು. ಈ ವೇಳೆ ಮೂವರು ಸ್ನೇಹಿತರು ಸೇರಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ. ಆಗ ಈ ಮೂವರ ಮೇಲೆ ದಾಳಿ ಮಾಡಿದೆ. ಮೂವರು ಆನೆಯಿಂದ ತಪ್ಪಿಸಿಕೊಳ್ಳಲು ಓಡಿದ್ದಾರೆ. ಈ ವೇಳೆ ಮನೋಹರ್ ಪಟೇಲ್ ಆನೆಯ ಕಾಲಿನಡಿ ಸಿಕ್ಕಿ ಅಪ್ಪಚ್ಚಿಯಾಗಿ ಸಾವನ್ನಪ್ಪಿದ್ದಾನೆ.