FILM
ಜನಸಾಮಾನ್ಯರಂತೆ ಪುತ್ತೂರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ
ಜನಸಾಮಾನ್ಯರಂತೆ ಪುತ್ತೂರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ
ಮಂಗಳೂರು ಫೆಬ್ರವರಿ 17: ಮಲೆಯಾಳಂನ ನಟ ಮಮ್ಮುಟ್ಟಿ ಕರಾವಳಿಯ ಮಸೀದಿಯೊಂದಕ್ಕೆ ತೆರಳಿ ಶುಕ್ರವಾರ ಜುಮಾ ನಮಾಝ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ.
ಸಿನೆಮಾ ಶೂಟಿಂಗ್ ಒಂದರ ಚಿತ್ರೀಕರಣಕ್ಕಾಗಿ ಕಳೆದ ಒಂದು ವಾರದಿಂದ ಮಂಗಳೂರಿನ ಪುತ್ತೂರಿನ ಕೊಯಿಲದಲ್ಲಿರುವ ಅವರು ಶುಕ್ರವಾರ ಸಾಮಾನ್ಯರಂತೆ ನಿಂತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ನಗರದ ಕೊಯಿಲದ ಅತ್ತೂರು ಮಸೀದಿಗೆ ತೆರಳಿದ ಅವರು ತಲೆಗೆ ಟೊಪ್ಪಿ ಧರಿಸಿ, ಸಾಮಾನ್ಯರಂತೆ ನಿಂತು ಪ್ರಾರ್ಥಿಸಿದರು.
ಶುಕ್ರವಾರ ನಮಾಝ್ ಮುಸ್ಲಿಮರಿಗೆ ಕಡ್ಡಾಯವಾಗಿದ್ದು, ಬಡವ ಶ್ರೀಮಂತ ಎನ್ನುವ ಭೇದವಿಲ್ಲದೇ ಭುಜಕ್ಕೆ ಭುಜ ತಾಗಿಸಿಕೊಂಡು ನಿಂತು ನಮಾಝ್ ಮಾಡುವ ಕ್ರಮವಿದೆ. ಅಂತಹ ಕ್ರಮವನ್ನು ಪಾಲಿಸಿದ ಮಮ್ಮುಟ್ಟಿಯವರ ಫೋಟೋ ವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ನಟ ಮಮ್ಮುಟ್ಟಿ ತಲೆಗೆ ಟೊಪ್ಪಿ ಧರಿಸಿ, ಕೈಕಟ್ಟಿ ನಮಾಝ್ ನಲ್ಲಿ ನಿರತವಾಗಿರುವುದು ಕಂಡುಬಂದಿದೆ.