LATEST NEWS
ರೈಲಿನ ಬೋಗಿಗಳಲ್ಲಿ ಇನ್ನು ಮುಂದೆ ರಿಸರ್ವೇಶನ್ ಚಾರ್ಟ್ ಅಂಟಿಸುವುದಿಲ್ಲ
ರೈಲಿನ ಬೋಗಿಗಳಲ್ಲಿ ಇನ್ನು ಮುಂದೆ ರಿಸರ್ವೇಶನ್ ಚಾರ್ಟ್ ಅಂಟಿಸುವುದಿಲ್ಲ
ನವದೆಹಲಿ ಫೆಬ್ರವರಿ 17: ಇನ್ನು ಮುಂದೆ ರೈಲಿನಲ್ಲಿ ರಿಸರ್ವೇಶನ್ ಚಾರ್ಟ್ ನ್ನು ಬೋಗಿಗೆ ಅಂಟಿಸಲಾಗುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆ ಇಲಾಖೆ ತನ್ನ ಎಲ್ಲಾ ರೈಲ್ವೆ ವಿಭಾಗಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದು , ರಿಸರ್ವೇಶನ್ ಚಾರ್ಟ್ ನ್ನು ರೈಲಿನ ಬೋಗಿಗಳಿಗೆ ಅಂಟಿಸುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ. ಈ ಸೂಚನೆ ಸದ್ಯ 6 ತಿಂಗಳಿಗೆ ಮಾತ್ರ ಪರಿಕ್ಷಾರ್ಥವಾಗಿ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಲಾಗಿದೆ. ರೈಲ್ವೆ ಇಲಾಖೆ ಪ್ರಾಯೋಗಿಕ ಮಾರ್ಚ್ 1 ರಿಂದ ಈ ಆದೇಶವನ್ನು ಜಾರಿಗೆ ತರಲಿದೆ.
ಮಾರ್ಚ್ 1ರಿಂದ, ಎ1,ಎ ಮತ್ತು ಬಿ ದರ್ಜೆಯ ನಿಲ್ದಾಣಗಳಿಂಡ ಹೊರಡುವ ಎಲ್ಲಾ ರೈಲುಗಳಿಲ್ಲಿ ಕಾಯ್ದಿರಿಸಿದವರ ವಿವರಣಾ ಪಟ್ಟಿಯನ್ನು ಅಂಟಿಸುವ ಕ್ರಮವನ್ನು ಹಿಂಪಡೆಯಲು ಮಂಡಳಿ ನಿರ್ಧರಿಸಿದೆ. ಈ ಕ್ರಮ ಮುಂದಿನ ಆರು ತಿಂಗಳ ಕಾಲ ಜಾರಿಯಲ್ಲಿರಲಿದೆ. ರಿಸರ್ವೇಶನ್ ಚಾರ್ಟ್ ನ್ನು ರೈಲಿನ ಬೋಗಿಗಳಿಗೆ ಅಂಟಿಸುವುದನ್ನು ನಿಲ್ಲಿಸಿದ್ದರೂ , ರೈಲ್ವೆ ನಿಲ್ದಾಣದ ನೋಟಿಸ್ ಬೋರ್ಡ್ ನಲ್ಲಿ ಅಂಟಿಸಲಾಗವುದು.
ರೈಲ್ವೆ ರಿಸರ್ವೇಶನ್ ಚಾರ್ಟ್ ನ್ನು ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಇಲೆಕ್ಟ್ರಾನಿಕ್ ಚಾರ್ಟ್ ನ ಪ್ಲಾಸ್ಮಾ ಪರದೆಯ ಮೇಲೆ ಬಿತ್ತರಗೊಳ್ಳಲಿದೆ.
ಈ ಆದೇಶದ ಹೊರತಾಗಿಯೂ ಯಾವುದೇ ಸಮಯದಲ್ಲಿ ಎಲೆಕ್ಟ್ರಾನಿಕ್ ಚಾರ್ಟ್ ಕೆಲಸ ಮಾಡದಿದ್ದಾಗ, ತುರ್ತಾಗಿ ಮತ್ತೆ ರಿಸರ್ವೇಶನ್ ಚಾರ್ಟ್ ನ್ನು ರೈಲಿ ಬೋಗಿಗೆ ಅಂಟಿಸಲು ಅವಕಾಶ ನೀಡಿದೆ.
You must be logged in to post a comment Login