Connect with us

    LATEST NEWS

    ಉಪ್ಪಿನಂಗಡಿಯಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್

    ಉಪ್ಪಿನಂಗಡಿಯಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್

    ಉಪ್ಪಿನಂಗಡಿ ಫೆಬ್ರವರಿ 16: ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ. ಗ್ಯಾಂಗ್ ರೇಪ್ ನಡೆಸಿದ ಕಾಮುಕರು ಯುವತಿಯನ್ನು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

    ಗುರುವಾರ ರಾತ್ರಿ ಬೆಟ್ಟಂಪಾಡಿಯ ಯುವತಿಯೋರ್ವಳನ್ನು ಕರೆತಂದು ನೆಲ್ಯಾಡಿ ಬಳಿಯ ಖಾಲಿ ಮನೆಯಲ್ಲಿ ಆರೋಪಿಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಬಳಿಕ ತಡರಾತ್ರಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಯುವತಿಯನ್ನು ಬಿಟ್ಟು ಹೋಗಿದ್ದಾರೆನ್ನಲಾಗಿದೆ.

    ಘಟನೆಯ ಬಗ್ಗೆ ಸಂತ್ರಸ್ಥೆ ಯುವತಿಯು ಧನಂಜಯ ಹಾಗೂ ಇನ್ನೋರ್ವ ಆರೋಪಿಯ ವಿರುದ್ಧ ಇಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply