FILM
ಹವಮಾನ ಬದಲಾವಣೆ – ಪುರುಷರಿಗೆ ಸಮಸ್ಯೆ ಹೆಚ್ಚು ಎಂದು ಕಾಲೆಳೆದ ನಟಿ ದಿಯಾ ಮಿರ್ಜಾ
ನವದೆಹಲಿ: ಹವಾಮಾನ ಬದಲಾವಣೆಯಿಂದ ಉಂಟಾಗುವ ಗಂಭೀರ ಸಮಸ್ಯೆಯೊಂದರ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಸಂಶೋಧನೆಯ ಲೇಖನವನ್ನು ನಟಿ ದಿಯಾ ಮಿರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ..ಈ ಗಂಭೀರ ಸಮಸ್ಯೆಯಿಂದ ಪುರುಷರಿಗೆ ಉಂಟಾಗುವ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮಾಲಿನ್ಯದಿಂದಾಗಿ ಪುರುಷರ ಜನನಾಂಗ ಕುಗ್ಗುತ್ತಿವೆ ಎಂದು ಇತ್ತೀಚೆಗೆ ಸ್ಕೈ ನ್ಯೂಸ್ ಲೇಖನ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದಿಯಾ ಅದೇ ರೀತಿ ಟ್ವೀಟ್ ಮಾಡಿ, ಈಗ ಜಗತ್ತು ಹವಾಮಾನ ವೈಪರೀತ್ಯ ಮತ್ತು ವಾಯು ಮಾಲೀನ್ಯವನ್ನು ಸ್ವಲ್ಪ ಹೆಚ್ಚು ಸೀರಿಯಸ್ ಆಗಿ ತೆಗೆದುಕೊಳ್ಳಬಹುದಾ ಎಂದು ಬರೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಕೊರೋನಾ ಮಹಾಮಾರಿ ಜನರಿಗೆ ಎಚ್ಚರಗೊಳ್ಳುವ ಕರೆ ಎಂದು ಮಾನವರು ಮತ್ತು ಪರಿಸರದ ನಡುವಿನ ಅಸಮತೋಲನವನ್ನು ತಿಳಿದುಕೊಳ್ಳಲು ನಾವು ಗಮನಹರಿಸಬೇಕು ಎಂದು ದಿಯಾ ಹೇಳಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನ ಮೌಂಟ್ ಸಿನಾಯಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ Dr Shanna ಅವರು ನಡೆಸಿರುವ ಸಂಶೋಧನೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ವರದಿಯನ್ನು ಇಂಗ್ಲೆಂಡ್ನ https://news.sky.com/ ಪ್ರಕಟಿಸಿದೆ.
ವಾಯಮಾಲಿನ್ಯ, ಭೂ ಮಾಲಿನ್ಯದಿಂದ ಹಾಗೂ ಪ್ಯ್ಲಾಸ್ಟಿಕ್ ತ್ಯಾಜ್ಯಗಳಲ್ಲಿನ ಥಾಲೇಟ್‌ಗಳು ಮಾನವನ ಸಂತಾನೋತ್ಪತ್ತಿ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದರಿಂದ ಹುಟ್ಟುತ್ತಿರುವ ಮಕ್ಕಳ ಜನನಾಂಗ ಕುಗ್ಗುತ್ತಾ ಬರುತ್ತಿದೆ ಎಂದು ವರದಿ ಹೇಳಿದೆ. ಅಧ್ಯಯನಕ್ಕೆ ಅವರು ಎಂಟು ವರ್ಷಗಳಿಂದ ವಿವಿಧ ವಲಯಗಳಿಂದ ಪ್ರತಿ ವರ್ಷ ಸುಮಾರು 4000 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಬಂದಿದ್ದರಂತೆ.
ಅಲ್ಲದೇ ಪರಿಸರ ಮಾಲಿನ್ಯದಿಂದ ಯುವಕರ ವಿರ್ಯದ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.
Now maybe the world will take #ClimateCrises and #AirPollution a little more seriously? https://t.co/zSHfek3iWN
— Dia Mirza (@deespeak) March 26, 2021