ಬೆಂಗಳೂರು ಎಪ್ರಿಲ್ 15: ಭಾರತೀಯ ಪೌರತ್ವ ಹೊಂದಿಲ್ಲದೇ ಇದ್ದರೂ ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ನಟ ಚೇತನ್ ಗೆ ಕೇಂದ್ರ ಸರಕಾರ ಸರಿಯಾಗಿಯೇ ತಿರುಗೇಟು ನೀಡಿದ್ದು, ಚೇತನ್ ವೀಸಾವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ.


ವೀಸಾ ರದ್ದಾಗಿರುವ ಬಗ್ಗೆ ಅವರಿಗೆ ಕೇಂದ್ರ ಗೃಹ ಇಲಾಖೆ ನೋಟಿಸ್ ಕಳುಹಿಸಿದೆ. ಈ ಕುರಿತು ಮಾತನಾಡಿರುವ ಚೇತನ್, ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ಆದರೆ, ನಾನು ಅಮೆರಿಕಕ್ಕಾಗೆ ಹೋಗಲ್ಲ. ಇಲ್ಲಿಯೇ ಇರ್ತೀನಿ. 15 ದಿನಗಳ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ತಡೆ ತರುತ್ತೇನೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

23 ವರ್ಷ ನಾನು ಇದ್ದಿದ್ದು, ಓದಿದ್ದು ಅಮೆರಿಕಾದಲ್ಲಿ. ಆ ನಂತರ ಸೇವೆ ಸಲ್ಲಿಸಲು ಭಾರತಕ್ಕೆ ಬಂದೆ. 18 ವರ್ಷದಿಂದ ಇಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೆ ಆಗಿರೋದು 2018 ರಲ್ಲಿ ಒಸಿಐ (ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ) ಕೊಟ್ಟಿದ್ದಾರೆ. ಆದರ ಜೊತೆಗೆ ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ ಎಲ್ಲವೂ ಇದೆ. ತೆರಿಗೆ ಕೂಡಾ ಕಟ್ಟುತ್ತಿದ್ದೇನೆ. ಈಗ ತಕ್ಷಣವೇ OCI ರದ್ದು ಮಾಡಿರುವುದಾಗಿ ನೋಟೀಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ ಎಂದಿದ್ದಾರೆ.

Share Information