LATEST NEWS
ರಸ್ತೆಯ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಇಂಜಿನಿಯರಿಂಗ್ ವಿಧ್ಯಾರ್ಥಿನಿ ಸಾವು
ರಸ್ತೆಯ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಇಂಜಿನಿಯರಿಂಗ್ ವಿಧ್ಯಾರ್ಥಿನಿ ಸಾವು
ಪುತ್ತೂರು ಅಕ್ಟೋಬರ್ 25: ರಸ್ತೆಯ ವಿಭಾಜಕಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ವಿಧ್ಯಾರ್ಥಿನಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪುತ್ತೂರಿನ ದರ್ಬೆ ಎಂಬಲ್ಲಿ ನಡೆದಿದೆ.
ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ಮರಿಯಮ್ಮ ಸಮ್ರೀನಾ ಮೃತ ದುರ್ದೈವಿ. ಪುತ್ತೂರಿನ ದರ್ಬೆ ಎಂಬಲ್ಲಿ ತನ್ನ ಆಕ್ಟಿವಾ ಸ್ಕೂಟರ್ ನಲ್ಲಿ ತೆರಳುತ್ತಿರುವ ಸಂದರ್ಭ ರಸ್ತೆಯ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ ಮರಿಯಮ್ಮ ಸಮ್ರೀನಾ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
You must be logged in to post a comment Login