LATEST NEWS
ನೋಂದಣಿ ರದ್ದಾಗಲಿರುವ 100 ಸಿಸಿಯ ವಾಹನಗಳ ಲಿಸ್ಟ್
ನೋಂದಣಿ ರದ್ದಾಗಲಿರುವ 100 ಸಿಸಿಯ ವಾಹನಗಳ ಲಿಸ್ಟ್
ಮಂಗಳೂರು ಅಕ್ಟೋಬರ್ 25: 100 ಸಿಸಿ.ಗೆ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಹೈಕೋರ್ಟ್ ನ ಆದೇಶದ ಪ್ರಕಾರ ಸರಕಾರ ಈ ಆದೇಶ ಹೊರಡಿಸಿದ್ದು , ಇನ್ನು ಮುಂದೆ ಯಾವುದೇ 100 ಸಿಸಿಗಿಂತ ಕಡಿಮೆ ಇರುವ ವಾಹನಗಳ ನೊಂದಣಿಯನ್ನು ರದ್ದುಪಡಿಸಿದೆ.
ಆದರೆ 100 ಸಿಸಿ ಗಿಂತ ಕಡಿಮೆ ಇರುವ ವಾಹನಗಳು ಒಂದು ಸೀಟ್ ಆಳವಡಿಸಿಕೊಂಡು ವಾಹನದ ಸಾಮರ್ಥ್ಯ ಒಂದು ಸೀಟು ಎಂದು ನಮೂದಿಸಿ ವಾಹನವನ್ನು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಹಳೆಯ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಹೊಸದಾಗಿ ನೊಂದಾವಣಿ ಮಾಡಿಕೊಳ್ಳುವ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದೆ.
ಸದ್ಯ ನೊಂದಣಿ ರದ್ದಾಗಲಿರುವ ವಾಹನಗಳು
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ – 87.8 ಸಿಸಿ
ಟಿವಿಎಸ್ ಸ್ಪೋರ್ಟ್ – 99.77ಸಿಸಿ
ಹಿರೋ ಎಚ್ ಎಫ್ ಡಿಲಕ್ಸ್ – 97.2 ಸಿಸಿ
ಹಿರೋ ಸ್ಪ್ಲೇಂಡರ್ ಪ್ಲಸ್ – 97.2 ಸಿಸಿ
ಟಿವಿಎಸ್ ಎಕ್ಸ ಎಲ್ 100 – 99.7 ಸಿಸಿ
ಹಿರೋ ಸ್ಪ್ಲೇಂಡರ್ ಪ್ರೋ- 97.2 ಸಿಸಿ
ಹಿರೋ ಎಚ್ ಎಫ್ ಡಿಲಕ್ಸ್ ಇಕೋ – 97 ಸಿಸಿ
ಹಿರೋ ಪ್ಯಾಶನ್ ಪ್ರೋ ಐ3ಎಸ್ – 97.2 ಸಿಸಿ
You must be logged in to post a comment Login