Connect with us

LATEST NEWS

ಉದ್ಯಾವರ – ರಸ್ತೆ ದಾಟುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದ ಬಸ್ – ಛಿದ್ರವಾದ ದೇಹ

ಉಡುಪಿ ಡಿಸೆಂಬರ್ 2: ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸಮೀಪ ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ.


ಮೃತ ಯುವಕನನ್ನು ಉದ್ಯಾವರ ನಿವಾಸಿ ಸುನಿಲ್ ಎಂದು ಗುರುತಿಸಲಾಗಿದ್ದು, ಇವರು ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭ ರಸ್ತೆ ದಾಟುತ್ತಿದ್ದ ಸಂದರ್ಭ ಬಸ್ಸು ಡಿಕ್ಕಿ ಹೊಡೆದಿದ್ದು, ಬಸ್ಸಿನ ಚಕ್ರಕ್ಕೆ ಸಿಲುಕಿದ ಸುನಿಲ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಸುನಿಲ್ ದೇಹ ಛಿದ್ರವಾಗಿದ್ದು, ಅಪಘಾತದ ಭೀಕರತೆ ತೋರಿಸುತ್ತಿದೆ.


ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Facebook Comments

comments