LATEST NEWS
ಹೆತ್ತವರ ನಿರ್ಲಕ್ಷದಿಂದ ಚಲಿಸುತ್ತಿದ್ದ ಟ್ಯಾಂಕರ್ ಅಡಿ ಬಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವು
ಮಂಗಳೂರು ಡಿಸೆಂಬರ್ 2: ಹೆತ್ತವರ ನಿರ್ಲಕ್ಷದಿಂದಾಗಿ ರಸ್ತೆ ದಾಟುತ್ತಿದ್ದ ವೇಳೆ ನೀರಿನ ಟ್ಯಾಂಕರ್ ಅಡಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಮಗು ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಮೂಲತಃ ಉತ್ತರ ಪ್ರದೇಶ ಮೂಲದ, ಉಳ್ಳಾಲಬೈಲು ಬಾಕಿಮಾರ್ ನಲ್ಲಿ ಬಾಡಿಗೆ ನಿವಾಸದಲ್ಲಿರುವ ಶರವಣ್ ಕುಮಾರ್ ಮತ್ತು ಪಿಂಕಿ ದಂಪತಿಗಳ ಕೊನೆಯ ಪುತ್ರ ಕೃಷ್ಣ ಮೃತಪಟ್ಟ ದುರ್ದೈವಿ.
ಇದೇ ಸೋಮವಾರ ಸಂಜೆ ತಾಯಿ ಮತ್ತು ಸಹೋದರ ಸಹೋದರಿಯರೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ ಟ್ಯಾಂಕರ್ ಹರಿದ ಪರಿಣಾಮ ಮಗುವಿನ ಸೊಂಟದ ಕೆಳಗಿನ ಎರಡೂ ಕಾಲುಗಳು ತುಂಡಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಯಿ ಮಕ್ಕಳ ಕುಟುಂಬವು ಉಳ್ಳಾಲ ಬೀಚ್ ಗೆ ವಿಹಾರಕ್ಕೆಂದು ತೆರಳಿ ಹಿಂದಿರುಗುವಾಗ ದುರ್ಘಟನೆ ನಡೆದಿತ್ತು. ಬಾಲಕನಿಗೆ ಎರಡು ದಿವಸ ಚಿಕಿತ್ಸೆ ನೀಡಿದರೂ ಯಾವುದೇ ಫಲ ನೀಡದ ಹಿನ್ನೆಲೆ ಇಂದು ಸಂಜೆ ಕೃಷ್ಣ ಮೃತಪಟ್ಟಿದ್ದಾನೆ.
Facebook Comments
You may like
-
ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ..ಆರೋಪಿ ಪತ್ತೆಗೆ ವಿಶೇಷ ತಂಡ
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
-
ವಿದ್ಯಾರ್ಥಿನಿಯರ ಮೈಮುಟ್ಟಿ ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಬಿತ್ತು ಧರ್ಮದೇಟು..!!
-
ಅಂಡರ್ ವೇರ್ ನಲ್ಲಿ 2.15 ಕೆಜಿ ಚಿನ್ನ ಸಾಗಾಟಕ್ಕೆ ಯತ್ನ ಇಬ್ಬರು ಆರೆಸ್ಟ್
-
ಟೈಮಿಂಗ್ ವಿಚಾರದಲ್ಲಿ ನಡು ರಸ್ತೆಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ…!!
-
ಮಂಗಳೂರಿನಲ್ಲಿ ಮತ್ತೆ ಕಾಗೆಗಳ ಸಾವು..ಹಕ್ಕಿ ಜ್ವರ ಆತಂಕ
You must be logged in to post a comment Login