LATEST NEWS
ಬಸ್ ನೊಳಗೆ ತೂರಿ ಬಂದ ಗ್ಯಾಸ್ ಪೈಪ್ ಲೈನ್ – ಯುವತಿಯ ತಲೆ ಕಟ್
ರಾಜಸ್ಥಾನ : ಭೀಕರ ರಸ್ತೆ ಅಪಘಾತ ಒಂದರಲ್ಲಿ ಗ್ಯಾಸ್ ಪೈಪ್ ಲೈನ್ ಬಸ್ ನೊಳಗೆ ನುಗ್ಗಿದ ಪರಿಣಾಮ ಬಸ್ಸಿನಲ್ಲಿ ಕುಳಿತಿದ್ದ ಯುವತಿಯ ರುಂಡ ಕಟ್ಟಾಗಿರುವ ಭೀಕರ ಘಟನೆ ನಡೆದಿದೆ. ರಾಜಸ್ಥಾನದ ಪಾಲಿ ಜಿಲ್ಲೆಯ ಸುಮೇರಪುರ ಸಾಂಡೇರಾವ್ ಬಳಿಕ ರಾಷ್ಟ್ರೀಯ ಹೆದ್ದಾರಿ 162ರಲ್ಲಿ ಈ ಭಯಾನಕ ಅಪಘಾತ ಸಂಭವಿಸಿದೆ. ಅಪಘಾತಕ್ಕೊಳಗಾದ ಬಸ್ ಮಾರಾವಾಢ ಜಂಕ್ಷನ್ ನಿಂದ ಪುಣೆಯತ್ತ ಹೊರಟಿತ್ತು. ಸಾಂಡೇರಾವ್ ಬಳಿ ಹೆದ್ದಾರಿ ಪಕ್ಕದಲ್ಲಿಯೇ ಕೆಲ ದಿನಗಳಿಂದ ಗ್ಯಾಸ್ ಪೈಪ್ಲೈನ್ ಅಳವಡಿಕೆಯ ಕೆಲಸ ನಡೆಯುತ್ತಿತ್ತು.
ಮಂಗಳವಾರ ಸಹ ಹೆದ್ದಾರಿ ಪಕ್ಕದಲ್ಲಿಯೇ ಗ್ಯಾಸ್ ಪೈಪ್ಗಳನ್ನು ಅಳವಡಿಸಲಾಗುತ್ತಿತ್ತು. ಪೈಪ್ಲೈನ್ ಎತ್ತಿದ್ದ ಕ್ರೇನ್ ವಾಹನ ಅದನ್ನ ನಿಧಾನವಾಗಿ ತೋಡಿರುವ ಗುಂಡಿಯಲ್ಲಿ ಇರಿಸಬೇಕಿತ್ತು. ಪೈಪ್ ಎತ್ತಿದಾಗ ಕ್ರೇನ್ ಅತಿಯಾದ ಭಾರದಿಂದ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಪೈಪ್ ನೇರವಾಗಿ ಪಕ್ಕದಲ್ಲಿ ಹೋಗ್ತಿದ್ದ ಬಸ್ ನೊಳಗೆ ಒಂದು ಕಡೆಯಿಂದ ನುಗ್ಗಿ ಹೊರ ಬಂದಿದೆ.
ಗ್ಯಾಸ್ ಪೈಪ್ಲೈನ್ ಬಸ್ನೊಳಗೆ ನುಗ್ಗಿದ ಪರಿಣಾಮ 24ಕ್ಕೂ ಅಧಿಕ ಜನರು ಗಾಯಗೊಂಡಿರುವ ಭಯಾನಕ ಅಪಘಾತ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬಸ್ ನಲ್ಲಿದ್ದ ಮಹಿಳೆಯ ರುಂಡ ಕಟ್ ಆಗಿದ್ದು, ಆಕೆಯ ಮಡಿಲಿನಲ್ಲಿದ್ದ ನಾಲ್ಕು ತಿಂಗಳಿನ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಒಟ್ಟು ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಗ್ಯಾಸ್ಪೈಪ್ ಬಸ್ನೊಳಗೆ ನುಗ್ಗಿದ್ದರಿಂದ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯ ತಲೆ ಕಟ್ ಆಗಿದೆ. ಬಸ್ ಸ್ಲೀಪರ್ ಕೋಚ್ ಆಗಿದ್ದರಿಂದ ಹೆಚ್ಚಿನ ಪ್ರಾಣಾಪಾಯ ಸಂಭವಿಸಿಲ್ಲ. ಮಲಗಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕುಳಿತವರಿಗೆ ಗಂಭೀರವಾಗಿ ಗಾಯಾಗೊಂಡಿದ್ದಾರೆ. ಒಟ್ಟು 24 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನ ಸಾಂಡೇರಾವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಪಾಲಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮೃತರನ್ನು ನೈನಾ ದೇವಿ ಮತ್ತು ಭಂವರ್ ಲಾಲ್ ಪ್ರಜಾಪತ್ ಎಂದು ಗುರುತಿಸಲಾಗಿದೆ. ಸಾಂಡೇರಾವ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್ ಪೈಪ್ ನುಗುತ್ತಿದ್ದಂತೆ ಎಚ್ಚೆತ್ತ ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಹೆಚ್ಚಿನ ಸಾವು ಸಂಭವಿಸಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
Facebook Comments
You may like
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಬಿಯರ್ ತುಂಬಿದ್ದ ಲಾರಿ ಪಲ್ಟಿ…ಬಿಯರ್ ಬಾಟಲ್ ಗಳಿಗೆ ಮುಗಿಬಿದ್ದ ಮದ್ಯಪ್ರಿಯರು
-
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
-
ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ..ಆರೋಪಿ ಪತ್ತೆಗೆ ವಿಶೇಷ ತಂಡ
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
-
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಆತ್ಮಹತ್ಯೆ ಶಂಕೆ
You must be logged in to post a comment Login