KARNATAKA
10 ಅಡಿ ಆಳದ ನೀರಿನ ಸಂಪ್ಗೆ ಬಿದ್ದ ಮಗುವನ್ನು ಜೀವದ ಹಂಗು ತೊರೆದು ರಕ್ಷಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್.!
ಬೆಂಗಳೂರು : 10 ಅಡಿ ಆಳದ ನೀರಿನ ಸಂಪ್ಗೆ ಬಿದ್ದ ಮಗುವನ್ನು ಪೊಲೀಸ್ ಅಧಿಕಾರಿಯೊಬ್ಬರು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಿಇಎಲ್ನ ಬಳಿ ಮಗು ಆಟ ಆಡುತ್ತ 10 ಅಡಿ ಆಳದ ಸಂಪ್ಗೆ ಮಗು ಬಿದ್ದಿದೆ. ಮಗು ಬಿದ್ದಿದ್ದನ್ನು ಗಮನಿಸಿದ ಅಲ್ಲಿದ್ದ ಮಹಿಳೆಯರು ಸಹಾಯಕ್ಕಾಗಿ ಕೂಗಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಠಾಣೆಗೆ ತೆರಳುತ್ತಿದ್ದ ಪಿಎಸ್ಐ ನಾಗರಾಜ್ಗೆ ವಿಷಯ ತಿಳಿಸಿದ್ದು ಪಿಎಸ್ಐಯವರ ಸಮಯ ಪ್ರಜ್ಞೆಯಿಂದಾಗಿ ಎರಡುವರೆ ವರ್ಷದ ಮಗುವಿನ ಜೀವ ಉಳಿದಿದೆ. ಸಂಪ್ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದು ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಕೂಡಲೇ 10 ಅಡಿ ಆಳದ ಸಂಪ್ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ ಮಾಡಿ, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ. ಏನೇ ಆಗಲಿ ಸರಿಯಾದ ಸಮಯಕ್ಕೆ ದೇವರಂತೆ ಬಂದು ಮಗುವಿನ ಜೀವ ಉಳಿಸಿದಕ್ಕೆ ಮಗುವಿನ ಪೋಷಕರು ಪಿಎಸ್ಐ ನಾಗರಾಜ್ಗೆ ಧನ್ಯವಾದ ಅರ್ಪಿಸಿದ್ದಾರೆ.