Connect with us

  KARNATAKA

  10 ಅಡಿ ಆಳದ ನೀರಿನ ಸಂಪ್​​ಗೆ ಬಿದ್ದ ಮಗುವನ್ನು ಜೀವದ ಹಂಗು ತೊರೆದು ರಕ್ಷಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್.!

  ಬೆಂಗಳೂರು : 10 ಅಡಿ ಆಳದ ನೀರಿನ ಸಂಪ್​​ಗೆ ಬಿದ್ದ ಮಗುವನ್ನು ಪೊಲೀಸ್ ಅಧಿಕಾರಿಯೊಬ್ಬರು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

   

  ನಗರದ ಬಿಇಎಲ್​ನ ಬಳಿ ಮಗು ಆಟ ಆಡುತ್ತ 10 ಅಡಿ ಆಳದ ಸಂಪ್​​ಗೆ ಮಗು ಬಿದ್ದಿದೆ. ಮಗು ಬಿದ್ದಿದ್ದನ್ನು ಗಮನಿಸಿದ ಅಲ್ಲಿದ್ದ ಮಹಿಳೆಯರು ಸಹಾಯಕ್ಕಾಗಿ ಕೂಗಿದ್ದಾರೆ.  ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಠಾಣೆಗೆ ತೆರಳುತ್ತಿದ್ದ ಪಿಎಸ್ಐ ನಾಗರಾಜ್​​ಗೆ ವಿಷಯ ತಿಳಿಸಿದ್ದು ಪಿಎಸ್ಐಯವರ ಸಮಯ ಪ್ರಜ್ಞೆಯಿಂದಾಗಿ ಎರಡುವರೆ ವರ್ಷದ ಮಗುವಿನ ಜೀವ ಉಳಿದಿದೆ.  ಸಂಪ್​​ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದು ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಕೂಡಲೇ 10 ಅಡಿ ಆಳದ ಸಂಪ್​​ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ ಮಾಡಿ, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ. ಏನೇ ಆಗಲಿ ಸರಿಯಾದ ಸಮಯಕ್ಕೆ ದೇವರಂತೆ ಬಂದು ಮಗುವಿನ ಜೀವ ಉಳಿಸಿದಕ್ಕೆ ಮಗುವಿನ ಪೋಷಕರು ಪಿಎಸ್ಐ ನಾಗರಾಜ್​​ಗೆ ಧನ್ಯವಾದ ಅರ್ಪಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply