FILM
29 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್
ಚೆನ್ನೈ ನವೆಂಬರ್ 20: ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ತಮ್ಮ 29 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ಮದೆಯಾಗಿ 29 ವರ್ಷಗಳ ಬಳಿಕ ಇದೀಗದ ರೆಹಮಾನ್ ಹಾಗೂ ಅವರ ಪತ್ನಿ ಸಾಯಿರಾ ಬಾನು ವಿಚ್ಚೇದನ ಪಡೆದುಕೊಂಡಿದ್ದಾರೆ.
1995ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಖತಿಜಾ, ರಹೀಮಾ, ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ರೆಹಮಾನ್ ಹಾಗೂ ಸಾಯಿರಾ ಪರವಾಗಿ ವಕೀಲೆ ವಂದನಾ ಶಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಂಬಂಧದಲ್ಲಿ ಭಾವನಾತ್ಮಕ ಒತ್ತಡಗಳು ಹೆಚ್ಚಾದ ಕಾರಣ ಈ ‘ಕಠಿಣ ನಿರ್ಧಾರ’ ಕೈಗೊಳ್ಳಬೇಕಾಯಿತು ಎಂದು ಅವರಿಬ್ಬರು ಹೇಳಿರುವುದಾಗಿ ತಿಳಿಸಲಾಗಿದೆ.
‘ಪರಸ್ಪರ ಆಳವಾದ ಪ್ರೀತಿ ಹೊಂದಿದ್ದರೂ, ಒತ್ತಡಗಳು ಮತ್ತು ಕಠಿಣ ಪರಿಸ್ಥಿತಿಗಳು ತಮ್ಮ ನಡುವೆ ಅಂತರ ಸೃಷ್ಟಿಸಿವೆ. ಅದನ್ನು ಸರಿಪಡಿಸಲಾಗದು ಎಂಬುದನ್ನು ಅವರು ಅರಿತಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ‘ಸಾಯಿರಾ ಹಾಗೂ ರೆಹಮಾನ್ ಅವರು ಅಪಾರ ನೋವು ಮತ್ತು ಸಂಕಟದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪುನರುಚ್ಚರಿಸಲಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರಿಬ್ಬರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದೂ ಶಾ ಹೇಳಿದ್ದಾರೆ.
2 Comments