KARNATAKA
ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ 103 ವರ್ಷದ ವೃದ್ಧೆ

ಚಿಕ್ಕಮಗಳೂರು: 103 ವರ್ಷದ ವೃದ್ಧೆಯೊಬ್ಬರು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ಪಾರ್ವತಮ್ಮ ಅವರು ಸೋಮವಾರ ರಾತ್ರಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಳಿ ರಸ್ತೆಯಲ್ಲಿ ಪಾದಯಾತ್ರೆ ತೆರಳುತ್ತಿದ್ದಾಗ ಸ್ಥಳೀಯರು ಮೊಬೈಲ್ ಫೋನ್ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದಾರೆ.

‘ದೇಶದ ಸೈನಿಕರಿಗೆ ಒಳ್ಳೆಯದಾಗಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಡಿರುವ ಕಾನೂನು ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಬೇಕು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶಕ್ಕೆ ಒಳ್ಳೆಯದಾಗುತ್ತಿದೆ. ಇನ್ನೂ ಒಳ್ಳೆಯದಾಗಬೇಕು. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇನೆ’ ಎಂದು ಪಾರ್ವತಮ್ಮ ಹೇಳಿದ್ದು ವಿಡಿಯೊದಲ್ಲಿದೆ.
ಹಿಂದಿನ ಸಾಧನೆ:
2024ರ ಮಾರ್ಚ್‌ನಲ್ಲಿ, ಪಾರ್ವತಮ್ಮ ಅವರು 102 ವರ್ಷದ ವಯಸ್ಸಿನಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ 18 ಕಿಲೋಮೀಟರ್ ಪಾದಯಾತ್ರೆ ಮಾಡಿ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಪ್ರಾರ್ಥನೆ ಮಾಡಿದ್ದರು. ಈ ಘಟನೆಯು ಅವರ ಅದಮ್ಯ ಧೈರ್ಯ ಮತ್ತು ಭಕ್ತಿಯ ಉದಾಹರಣೆಯಾಗಿದೆ.