ಬೀಡಿ ಸೇದುವವರಿಂದ ದೇಶಕ್ಕೆ ವಾರ್ಷಿಕ 80 ಸಾವಿರ ಕೋ. ನಷ್ಟ

ಬೆಂಗಳೂರು,ಡಿಸೆಂಬರ್ 24 : ಬೀಡಿ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಟಪರಿಣಾಮಗಳಿಂದ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ದೇಶಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಸಂಶೋಧನ ವರದಿಯಿಂದ ಧೃಡಪಟ್ಟಿದೆ.

ಓರ್ವ ವ್ಯಕ್ತಿ ಬೀಡಿ ಸೇದುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಅವನಿಗೆ ಸಿಗುವ ಚಿಕಿತ್ಸೆ ವೆಚ್ಚಾ, ವ್ಯಕ್ತಿಯ ಕೆಲಸದ ಮೇಲೆ ಉಂಟಾಗುವ ಪರಿಣಾಮ, ಕುಟುಂಬದ ಆದಾಯದಲ್ಲಿ ಉಂಟಾಗುವ ನಷ್ಟ. ವೈದ್ಯಕೀಯ ವೆಚ್ಚಗಳ ಕುರಿತು ರಾಷ್ಟ್ರೀಯ ಮಾದರಿ ಸಮೀಕ್ಷೆಯ ವರದಿ ಹಾಗೂ ಗ್ಲೋಬಲ್​ ಅಡಲ್ಟ್​ ಟೊಬ್ಯಾಕೋ ಸರ್ವೆಯ ವರದಿ ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡು ಈ ವರದಿ ಸಿದ್ಧ ಪಡಿಸಲಾಗಿದೆ.

ಟೊಬ್ಯಾಕೋ ಕಂಟ್ರೋಲ್​ ಜರ್ನಲ್​ನಲ್ಲಿ ಈ ವರದಿ ಇದೀಗ ಪ್ರಕಟವಾಗಿದೆ. ಅವಧಿಗೂ ಮುನ್ನ ಸಾವನ್ನಪ್ಪುವವರ ಪ್ರಮಾಣ ಹೆಚ್ಚುತ್ತಿರುವುದರಿಂದ ದೇಶಕ್ಕೆ ವಾರ್ಷಿಕ ಸುಮಾರು 80,000 ಕೋಟಿ ರೂ. ನಷ್ಟವಾಗುತ್ತಿದೆ.

ಇದು ದೇಶದ ಒಟ್ಟು ಜಿಡಿಪಿಯ ಶೇ. 0.5 ಕ್ಕೆ ಸಮವಾಗಿದೆ ಎಂದು ಎಂದು ನೂತನ ಸಂಶೋಧನಾ ವರದಿಯಿಂದ ಬಹಿರಂಗವಾಗಿದೆ.
ಬೀಡಿ ಉದ್ಯಮದಿಂದ ಸರ್ಕಾರಕ್ಕೆ 2016-17ರಲ್ಲಿ ಕೇವಲ 417 ಕೋಟಿ ರೂ. ತೆರಿಗೆ ಪಾವತಿಯಾಗಿದೆ.

ಆದರೆ, ಬೀಡಿಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳಿಂದ ಅಪಾರ ಪ್ರಮಾಣದ ಹಾನಿಯಾಗುತ್ತಿದೆ. ಭಾರತದಲ್ಲಿ ಬೀಡಿ ಸೇದುವವರ ಪ್ರಮಾಣ ಹೆಚ್ಚಿದೆ.

ಒಟ್ಟು ಧೂಮಪಾನಿಗಳ ಸಂಖ್ಯೆಯಲ್ಲಿ ಬೀಡಿ ಸೇದುವವರ ಪ್ರಮಾಣ ಶೇ. 80 ರಷ್ಟಿದೆ. ಅದರಲ್ಲೂ ಮುಖ್ಯವಾಗಿ 7.2 ಕೋಟಿ ಧೂಮಪಾನಿಗಳ ವಯಸ್ಸು 15 ವರ್ಷಕ್ಕಿಂತ ಕಡಿಮೆ ಇದೆ ಎಂಬ ಅತಂಕರಾರಿ ಅಂಶವನ್ನು ವರದಿಯಲ್ಲಿ ಉಲ್ಲೆಖಿಸಲಾಗಿದೆ.

Facebook Comments

comments