ಬಿಸಿಯೂಟ ತಿನ್ನದ್ದಕ್ಕೆ ಬಾಸುಂಡೆ ತಿನ್ನಿಸಿದ ಹರಮಿ ಶಿಕ್ಷಕ

ಉಡುಪಿ, ಡಿಸೆಂಬರ್ 24 : ಬಿಸಿಯೂಟ ಊಟ ಮಾಡದ ಕಾರಣ 1 ನೇ ತರಗತಿಯ ಪುಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಘಟನೆ ಕಾರ್ಕಳ ತಾಲೂಕಿನ ಕಾಂತಾವರ ಬೇಲಾಡಿ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮಧ್ಯಾಹ್ನದ ಬಿಸಿಯೂಟ ತಿನ್ನಲಿಲ್ಲ ಎಂಬ ಕಾರಣಕ್ಕೆ 1ನೇ ತರಗತಿ ವಿದ್ಯಾರ್ಥಿಗೆ ಶಾಲಾ ಮುಖ್ಯೋಪಾಧ್ಯಾಯ ಕಾಂತಾವರದ ಸುರೇಶ್ ಎಸ್.ಆರ್ ಥಳಿಸಿದ್ದಾರೆ, ಆರೋಪಿ ಶಿಕ್ಷಕನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ಅನಾರೋಗ್ಯಕ್ಕೆ ತುತ್ತಾಗಿದ್ದ, ಮಧ್ಯಾಹ್ನದ ಬಿಸಿಯೂಟ ಮಾಡುವ ಸ್ಥಿತಿಯಲ್ಲೂ ಇರಲಿಲ್ಲ. ಮುಖ್ಯೋಪಾಧ್ಯಾಯ ಸುರೇಶ್ ಅದೇ ಸಮಯಕ್ಕೆ ಸ್ಥಳಕ್ಕೆ ಬಂದು ವಿದ್ಯಾರ್ಥಿಯನ್ನು ಬೇರೆ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಬಿಸಿಯೂಟ ಮಾಡುವಂತೆ ವಿದ್ಯಾರ್ಥಿಯನ್ನು ಒತ್ತಾಯಿಸಿದರು ಎನ್ನಲಾಗಿದೆ.

ಒತ್ತಾಯಕ್ಕೆ ಮಣಿದ ವಿದ್ಯಾರ್ಥಿ ಬಿಸಿಯೂಟ ಮಾಡುವ ಸಂದರ್ಭ ವಾಂತಿ ಮಾಡಿದ. ಅದನ್ನೂ ಲೆಕ್ಕಿಸದೆ ವಿದ್ಯಾರ್ಥಿಯ ಬೆನ್ನಿಗೆ ತೀವ್ರವಾಗಿ ಥಳಿಸಿದ್ದು, ವಿದ್ಯಾರ್ಥಿ ಬೆನ್ನಿನಲ್ಲಿ ಬಾಸುಂಡೆ ಕಾಣಿಸಿಕೊಂಡಿದೆ.

22 ವರ್ಷಗಳಿಂದ ಶಿಕ್ಷಕ, ಮುಖ್ಯೋಪಾಧ್ಯಾಯನಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ಇದೀಗ ವ್ಯಾಪಕ ದೂರು ಕೇಳಿಬಂದಿವೆ.

ಈ ಕುರಿತು ವಿದ್ಯಾರ್ಥಿ ತಾಯಿ ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Facebook Comments

comments