ಶಾರ್ಟ್ ಸರ್ಕ್ಯುಟ್ ಗೆ ಹೊತ್ತಿ ಉರಿದ ಸಿಂಡಿಕೇಟ್ ಬ್ಯಾಂಕ್ ದಾಖಲೆಗಳು

ಉಡುಪಿ ಡಿಸೆಂಬರ್ 24: ಹೆಬ್ರಿ ಆಗುಂಬೆ ಮುಖ್ಯ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಗೆ ಬೆಂಕಿ ತಗುಲಿ ಬ್ಯಾಂಕ್ ನ ದಾಖಲೆಗಳು ಸಂಪೂರ್ಣ ಬಸ್ಮವಾದ ಘಟನೆ ನಡೆದಿದೆ.

ಹೆಬ್ರಿ ಆಗುಂಬೆ ಮುಖ್ಯರಸ್ತೆಯಲ್ಲಿರುವ ಈ ಬ್ಯಾಂಕ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಸಿಂಡಿಕೇಟ್ ಬ್ಯಾಂಕ್ ನ ಒಳಗೆ ಶಾಕ್‌ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಹೇಳಲಾಗಿದೆ.

ಒಳಗೆ ಇದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ ಮಾಹಿತಿ ತಿಳಿದ ಕಾರ್ಕಳದ ಅಗ್ನಿ ಶಾಮಕ ದಳದವರು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ಸೂಕ್ತ ಕಾರಣದ ತನಿಖೆ ನಡೆಸುತ್ತಿದ್ದಾರೆ.

4 Shares

Facebook Comments

comments