ಲಿಪ್ಟ್ ನ ಬಾಗಿಲಿನಲ್ಲಿ ಸಿಲುಕಿಕೊಂಡು ಮೃತಪಟ್ಟ ಬಾಲಕ

ಮಂಗಳೂರು ಮಾರ್ಚ್ 27: ಲಿಫ್ಟ್ ಬಾಗಿಲಿನಲ್ಲಿ ಬಾಲಕನೊಬ್ಬ ಸಿಲುಕಿಕೊಂಡು ಮೃತಪಟ್ಟ ಘಟನೆ ಮಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.

ಮಂಗಳೂರಿನ ಚಿಲಿಂಬಿಯ ಅಪಾರ್ಟ್ ಮೆಂಟಿನಲ್ಲಿ ಈ ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ ದಂಪತಿಯ ಮಗ ಮಂಜುನಾಥ್ (8) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಚಿಲಿಂಬಿಯ ಅಪಾರ್ಟ್ ಮೆಂಟ್ ನಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ದಂಪತಿಯ ಮಗ ಲಿಪ್ಟ್ ನಲ್ಲಿ ತೆರಳುವ ಸಂದರ್ಭ ಹಳೆಯ ಲಿಫ್ಟ್ ಬಾಗಿಲು ಹಾಕದೆ ಚಲಿಸಿದ್ದರಿಂದ ಲಿಪ್ಟ್ ನ ಬಾಗಿಲಿಗೆ ಸಿಲುಕಿಕೊಂಡ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.