ಸೈನೈಡ್ ಮೋಹನ್ ಮತ್ತೆ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ

ಮಂಗಳೂರು ಮಾರ್ಚ್ 27: ದೇಶದಲ್ಲೇ ಸಂಚಲನ ಮೂಡಿಸಿದ ಸರಣಿ ಹಂತಕ ಸೈನೈಡ್‌ ಮೋಹನ್‌ನ ಮತ್ತೆ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಪುತ್ತೂರು ನಗರ ಮತ್ತು ಮಡಿಕೇರಿ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ನಡೆಸಿದ ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿದ್ದು, ಎರಡೂ ಪ್ರಕರಣಗಳಲ್ಲೂ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಸೈನೆಡ್ ಮೋಹನ್ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು ವಿಡಿಯೋ ಕಾನ್ಪರೇನ್ಸ್ ಮೂಲಕ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರಾದ ಡಿ.ಟಿ ಪುಟ್ಟರಂಗಸ್ವಾಮಿ ಅವರು ಶಿಕ್ಷೆ ವಿಧಿಸಿದ್ದಾರೆ.

ಸೈನೆಡ್ ಮೋಹನ್ ವಿರುದ್ದ ಒಟ್ಟು 20 ಕೇಸ್ ಗಳಲ್ಲಿ 9 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ. ಇನ್ನು 11 ಕೇಸುಗಳು ಬಾಕಿ ಇವೆ.
ಸೈನೈಡ್‌ ಮೋಹನ್‌ 2004 ರಿಂದ 2009ರವರೆಗೆ 20 ಯುವತಿಯರನ್ನು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ಇದರಲ್ಲಿ 9 ಪ್ರಕರಣ ಇತ್ಯರ್ಥವಾಗಿದೆ.