Connect with us

KARNATAKA

ಶಿವಮೊಗ್ಗ – ಟಿವಿ ರಿಮೋಟ್ ಕೊಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಶಿವಮೊಗ್ಗ ಡಿಸೆಂಬರ್ 21: ಮನೆಯಲ್ಲಿ ಟಿವಿ ರಿಮೋಟ್ ಗಾಗಿ ಗಲಾಟೆ ವೇಳೆ ಅಜ್ಜಿ ಬಂದು ಬೈದಿದ್ದಕ್ಕೆ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಮೃತ ಬಾಲಕಿಯನ್ನು ಸಹನಾ(16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಇಬ್ಬರು ಮಕ್ಕಳ ನಡುವೆ ರಿಮೋಟ್ ಗಾಗಿ ಗಲಾಟೆ ನಡೆದಿತ್ತು, ಈ ವೇಳೆ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ. ಭದ್ರಾವತಿ ತಾಲೂಕಿನ ಕಲ್ಲಿಹಾಳ್​ ನಿವಾಸಿಯಾದ ಮೃತ ಬಾಲಕಿ ಸಹನಾ, ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *