Connect with us

    LATEST NEWS

    ಚೀನಾದಲ್ಲಿ ನಡುಗಿದ ಭೂಮಿ : ನೂರಕ್ಕೂ ಅಧಿಕ ಬಲಿ,  ನೂರಾರು ಕಟ್ಟಡ ನೆಲಸಮ..!

    ಬೀಜಿಂಗ್: ವಾಯವ್ಯ ಚೀನಾದ ಗನ್ಸು- ಕ್ವಿಂಘೈ ಗಡಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ನೂರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 230ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ.

    ನೂರಾರು ಕಟ್ಟಡಗಳು ನೆಲಸಮವಾಗಿದ್ದು  ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಸುಮಾರು 100 ಮಂದಿ ಗನ್ಸು ಪ್ರಾಂತ್ಯದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇನ್ನು 11 ಮಂದಿ ಪಕ್ಕದ ಕ್ವಿಂಘೈ ಪ್ರಾಂತ್ಯದ ಹೈದೊಂಗ್ ನಗರದಲ್ಲಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸಿಸಿಟಿವಿ ಮಾಧ್ಯಮ ವರದಿ ಮಾಡಿದೆ.


    ಭೂಮಿ ಪ್ರಬಲವಾಗಿ ಕಂಪಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ಅನಾಹುತ ಉಂಟಾಗಿದೆ. ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿವೆ. ಭೂಮಿ ನಡುಗುವ ಅನುಭವವಾಗುತ್ತಿದ್ದಂತೆಯೇ ಜನರು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ರಸ್ತೆಗಳಿಗೆ ಓಡಿದ್ದಾರೆ. ಶೋಧ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು. ಬದುಕುಳಿದವರು ಹಾಗೂ ಅವರ ಆಸ್ತಿ ಪಾಸ್ತಿಗಳ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply