Connect with us

    LATEST NEWS

    ಹಮಾಸ್ ನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ – 195ಕ್ಕೂ ಅಧಿಕ ನಾಗರಿಕರ ಸಾವು

    ಇಸ್ರೇಲ್ ನವೆಂಬರ್ 02: ಹಮಾಸ್ ನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 195 ಮಂದಿ ಸಾವನಪ್ಪಿದ ಘಟನೆ ನಡೆದಿದ್ದು, ಇದರಲ್ಲಿ ಸುಮಾರು 770ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


    ದಾಳಿಯ ನಂತರ 120 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಈ ನಡುವೆ ಓರ್ವ ಇಸ್ರೇಲ್ ಸೈನಿಕ ಕೂಡ ಸಾವನ್ನಪ್ಪಿದ್ದಾನೆ ಎಂದು ಹಮಾಸ್ ಹೇಳಿದೆ. ಇಸ್ರೇಲ್, ಈಜಿಪ್ಟ್ ಮತ್ತು ಹಮಾಸ್ ನಡುವಿನ ಒಪ್ಪಂದದ ಅಡಿಯಲ್ಲಿ 500 ಜನರ ಪಟ್ಟಿಯಲ್ಲಿ ಕನಿಷ್ಠ 320 ವಿದೇಶಿ ನಾಗರಿಕರನ್ನು ಈಜಿಫ್ಟ್‌ಗೆ ಕಳುಹಿಸಲಾಗಿದೆ. ಉಳಿದ ವಿದೇಶಿ ನಾಗರಿಕರನ್ನು ಯುದ್ಧ ಪ್ರದೇಶದಿಂದ ಕಳಿಸುವ ಕಾರ್ಯ ನಡೆಯುತ್ತಿದೆ.

    ಹಮಾಸ್‌ ಬಂಡುಕೋರರ ಮೇಲೆ ಮುಗಿಬಿದ್ದಿರುವ ಇಸ್ರೇಲಿ ವಾಯುಪಡೆ, ಮಂಗಳವಾರ ರಾತ್ರಿ ನಡೆಸಿದ ಏರ್‌ ಸ್ಟ್ರೈಕ್‌ಗೆ ಹಮಾಸ್‌ ಉಗ್ರರ ಜಬಾಲಿಯಾ ಬೆಟಾಲಿಯನ್‌ ಕಮಾಂಡರ್‌ ಇಬ್ರಾಹಿಂ ಬಿಯಾರಿ ಹತನಾಗಿದ್ದಾನೆ. ಇನ್ನೊಬ್ಬ ಕಮಾಂಡರ್ ಕೂಡ ಬಲಿಯಾಗಿದ್ದಾನೆ ಎಂದು ಇಸ್ರೇಲ್ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply