Connect with us

KARNATAKA

ತಾಯಿಯನ್ನು ಬೈದಿದ್ದಕ್ಕೆ ಸ್ವಂತ ಮಾವನನ್ನೇ ಮುಗಿಸಿದ ಅಳಿಯ

ಹಾಸನ ನವೆಂಬರ್ 2: ತನ್ನ ತಾಯಿಯನ್ನು ನಿಂದಿಸಿದ್ದಕ್ಕೆ ಸ್ವಂತ ಮಾವನನ್ನು ಅಳಿಯ ಕೊಂದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಪ್ರಭುಸ್ವಾಮಿ (50) ಎಂದು ಗುರುತಿಸಲಾಗಿದೆ. ಈತನನ್ನು ಅಳಿಯ ಅಜಯ್ (22) ಕೊಲೆ ಮಾಡಿದ್ದಾನೆ.


ಕೊಲೆಯಾದ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ನೆಲೆಸಿದ್ದಳು. ಗಂಜಿಗೆರೆ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಅಣ್ಣ-ತಂಗಿ ವಾಸವಾಗಿದ್ದರು. ಹೀಗಾಗಿ ಆಸ್ತಿ ವಿಚಾರವಾಗಿ ಪ್ರಭುಸ್ವಾಮಿಯು ತನ್ನ ಸಾವಿತ್ರಮ್ಮ ಜೊತೆ ಆಗಾಗ ಜಗಳವಾಡುತ್ತಿದ್ದನು. ಕಂಠಪೂರ್ತಿ ಮದ್ಯಸೇವಿಸಿ ಬಂದ ಪ್ರಭುಸ್ವಾಮಿ, ಒಡಹುಟ್ಟಿದ ತಂಗಿ ಹಾಗೂ ಆಕೆಯ ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಸಾವಿತ್ರಮ್ಮ ಬೇಸತ್ತು ಹೋಗಿದ್ದಳು. ತನ್ನ ಮಗನಿಗೆ ಮಾವ ಜಗಳವಾಡುವ ವಿಷಯ ತಿಳಿಸಿದ್ದಳು. ಇಂದು ಕೂಡ ತಂಗಿಯೊಂದಿಗೆ ಜಗಳವಾಡಿ ಕೆಟ್ಟ ಪದಗಳಿಂದ ಪ್ರಭುಸ್ವಾಮಿ ನಿಂದಿಸಿದ್ದನು.

ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಜಯ್, ಮನೆಯಲ್ಲಿಯಿದ್ದ ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share Information
Advertisement
Click to comment

You must be logged in to post a comment Login

Leave a Reply